ಹೊಸದಿಲ್ಲಿ: “ಈ ಹಿಂದೆ ನಾವೆಲ್ಲರೂ ಒಂದಾಗಿದ್ದೆವು. ಅನಂತರ ಜಾತಿಗಳ ಹೆಸರಿನಲ್ಲಿ ನಮ್ಮ ನಡುವೆಯೇ ಅಂತರ ಮೂಡಿಸಿಕೊಂಡೆವು. ಪರಕೀಯರು ಈ ಅಂತರವನ್ನು ವಿಸ್ತರಿಸಿದರು.
ಈಗ ದೇಶಕ್ಕಾಗಿ ಮತ್ತೆ ನಾವೆಲ್ಲರೂ ಒಂದಾಗಬೇಕಿದೆ’ ಹೀಗೆಂದು ಸಮಾಜದಲ್ಲಿ ಸಾಮರಸ್ಯ ಕಾಯ್ದುಕೊಳ್ಳಲು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ. ಗುಜರಾತಿನ ಅಹ್ಮದಾಬಾದ್ ನಗರದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತರ “ಸಮಾಜ ಶಕ್ತಿ ಸಂಗಮ” ಸಭೆಯನ್ನು ದ್ದೇಶಿಸಿ ಮಾತನಾಡಿದ ಭಾಗವತ್, “ಸಮಚಿತ್ತದ ಸಮಾಜ ಮಾತ್ರ ಅಭಿವೃದ್ಧಿಯತ್ತ ನಡೆಯತ್ತದೆ. ವಿದೇಶಿಗರು ನಮ್ಮನ್ನು ವಿಭಜಿಸುವ ಮೂಲಕವೇ ನಮ್ಮನ್ನು ಸೋಲಿಸುತ್ತಾರೆ’ ಎನ್ನುವ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾತುಗಳನ್ನು ಸ್ಮರಿಸಿದರು. ಅಲ್ಲದೇ ದೇಶಕ್ಕಾಗಿ ನಾವೆಲ್ಲರೂ ಒಂದಾಗಬೇಕಿದೆ ಎಂದು ಹೇಳಿದರು.