ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು

ಬೆಂಗಳೂರು: ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದು ಸದನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರಗೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲೆಸೆದಿದ್ದಾರೆ.

ಜಂಟಿ ಅಧಿವೇಶನದಲ್ಲಿ ಬಜೆಟ್ ಕುರಿತ ಚರ್ಚೆ ಸಂದರ್ಭದಲ್ಲಿ, ಸಚಿವ ಅಶ್ವಥ್ ನಾರಾಯಣ ಹೇಳಿಕೆ ಗುಡುಗಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಧಮ್ಮಿದ್ರೆ, ತಾಕತ್ತಿದ್ದರೆ ನನ್ನನ್ನು ಮುಗಿಸಿ, ಹೊಡೆದು ಹಾಕಿ ಎಂದರು. ಯಾವ ಧರ್ಮವೂ ಕೂಡ ಕೊಲೆ ಮಾಡೋಕೆ ಹೇಳುವುದಿಲ್ಲ, ಯಾವ ಧರ್ಮವೂ ಕೂಡ ಹೊಡೆಯೋಕೆ, ಬಡಿಯೋಕೆ ಹೇಳುವುದಿಲ್ಲ, ಇದು ಬೌದ್ಧಿಕ ದಿವಾಳಿತನ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅವರು (ಅಶ್ವತ್ ನಾರಾಯಣ) ಆಡು ಭಾಷೆಯಲ್ಲಿ ಹೇಳಿದ್ದಾರೆ. ವಿಷಾದ ಕೂಡ ವ್ಯಕ್ತಪಡಿಸಿದ್ದಾರೆ ಎಂದರು.ಅದನ್ನು ಬಿಟ್ಟು ಬಜೆಟ್ ಮೇಲೆ ಚರ್ಚೆ ಮಾಡಬೇಕು ಎಂದರು.

ಜ್ಞಾನೇಂದ್ರ ಹೇಳಿಕೆಗೆ ಮುಗಿಬಿದ್ದ ಕಾಂಗ್ರೆಸ್ ಸದಸ್ಯರು, ಸೈದ್ಧಾಂತಿಕ ದಿವಾಳಿಯಾಗಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಗೃಹ ಸಚಿವರು ದುರ್ಬಲರಾಗಿದ್ದಾರೆ ಎಂದರು. ಮಧ್ಯಪ್ರವೇಶಿಸಿದ ಜಾನೇಂದ್ರ, ನಾನು ಚಾಲೆಂಜ್ ಮಾಡ್ತೇನೆ, ನಿಮಗಿಂತ ಆಡಳಿತ ಚೆನ್ನಾಗಿ ಮಾಡಿದ್ದೇನೆ, ಚರ್ಚೆ ಮಾಡೋಣ ಎಂದರು. ನೀವು ಉತ್ತಮ ಗೃಹ ಮಂತ್ರಿಯಾಗಿದ್ದರೇ ಅಶ್ವತ್ಥ ನಾರಾಯಣ ವಿರುದ್ಧ ಸುಮೊಟೋ ಕೇಸ್ ದಾಖಲಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Latest Indian news

Popular Stories