ಧಾರ್ಮಿಕ ಮತಾಂತರ ಗಂಭೀರವಾದ ವಿಷಯ ರಾಜಕೀಯ ಬಣ್ಣ ಬೇಡ – ಸುಪ್ರೀಂ ಕೋರ್ಟ್

ನವದೆಹಲಿ: ಧಾರ್ಮಿಕ ಮತಾಂತರ ಗಂಭೀರವಾದ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಈ ವಿಷಯಕ್ಕೆ ರಾಜಕೀಯ ಬಣ್ಣ ನೀಡಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಅಕ್ರಮ ಧಾರ್ಮಿಕ ಮತಾಂತರದ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವ ಸಂಬಂಧದ ಅರ್ಜಿಯ ಬಗ್ಗೆ ಸುಪ್ರೀಂ ಕೋರ್ಟ್  ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಹಾಜರಾಗಬೇಕೆಂದು ಸೂಚಿಸಿದೆ. 

ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಂಆರ್ ಷಾ, ಸಿ ಟಿ ರವಿಕುಮಾರ್ ಅವರಿದ್ದ ಪೀಠ, ವೆಂಕಟರಮಣಿ ಅವರಿಗೆ ಹಾಜರಾಗಲು ಸೂಚಿಸಿದ್ದಷ್ಟೇ ಅಲ್ಲದೇ,  ಈ ವಿಷಯದಲ್ಲಿ ಅಟಾರ್ನಿ ಜನರಲ್ ಅವರ ಸಹಾಯವನ್ನೂ ಕೋರ್ಟ್ ಕೋರಿದೆ. 

ಒತ್ತಾಯಪೂರ್ವಕ, ಉಡುಗೊರೆಗಳು ಮತ್ತು ವಿತ್ತೀಯ ಪ್ರಯೋಜನಗಳ ಮೂಲಕ ಬೆದರಿಕೆ, ಮೋಸಗೊಳಿಸುವ ಆಮಿಷದ ಮೂಲಕ ಮತಾಂತರ ಮಾಡುವುದನ್ನು ತಡೆಗಟ್ಟಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್, ಆಕರ್ಷಣೆಯಿಂದ ಮತಾಂತರ ನಡೆಯುತ್ತಿದ್ದರೆ, ಅದಕ್ಕೆ ಪರಿಹಾರವಾಗಿ ಏನು ಮಾಡಬೇಕು? ಸರಿಪಡಿಸುವ ಕ್ರಮಗಳೇನು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. 

Latest Indian news

Popular Stories