ನಕಲಿ ಪ್ರಮಾಣ ಪತ್ರದ ಆರೋಪಿಯ ಶವ ಪತ್ತೆ- ಆತ್ಮಹತ್ಯೆ ಶಂಕೆ

ಮಂಗಳೂರು, ಜೂ.21: ರೈಲ್ವೇ ಆರೋಗ್ಯ ಕೇಂದ್ರದ ಫಾರ್ಮಾಸಿಸ್ಟ್ ವಿಜಯನ್ ವಿ.ಎ ಅವರ ಪಾರ್ಥಿವ ಶರೀರ ಸೋಮವಾರ ತೊಕ್ಕೊಟ್ಟು ಬಳಿಯ ರೈಲ್ವೇ ಹಳಿಯಲ್ಲಿ ಪತ್ತೆಯಾಗಿದ್ದು, ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಯ ಆರೋಗ್ಯ ಘಟಕದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ನಕಲಿ ವೈದ್ಯಕೀಯ ಪ್ರಮಾಣಪತ್ರ ಹಗರಣದ ಆರೋಪಿಗಳಲ್ಲಿ ಮೃತರು ಒಬ್ಬರು. ಸ್ಥಳಕ್ಕೆ ರೈಲ್ವೆ ಮತ್ತು ಉಳ್ಳಾಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯನ್ ವಿ ಎ ಬೆಂಗಳೂರು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳ ಇತ್ತೀಚೆಗೆ ವಿಜಯನ್ ಸೇರಿದಂತೆ ಮೂವರನ್ನು ಬಂಧಿಸಿತ್ತು. ಸಹಾಯಕ ಮುಖ್ಯ ವೈದ್ಯಕೀಯ ಅಧೀಕ್ಷಕರನ್ನು ಒಳಗೊಂಡ ಈ ತಂಡವು ಕಳೆದ ಒಂದು ವರ್ಷದಲ್ಲಿ 1,500 ಕ್ಕೂ ಹೆಚ್ಚು ನಕಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ನೀಡಿದೆ ಎಂದು ಆರೋಪಿಸಲಾಗಿದೆ. ಸಾಮಾನ್ಯವಾಗಿ, ರೈಲ್ವೆ ವಿಜಿಲೆನ್ಸ್ ಸ್ಕ್ವಾಡ್ ರೈಲ್ವೆ ಅಧಿಕಾರಿಗಳ ವಿರುದ್ಧ ಇಂತಹ ಆರೋಪಗಳನ್ನು ತನಿಖೆ ಮಾಡುತ್ತದೆ. ಆದರೆ, ಅಪರಾಧದ ಗಂಭೀರತೆಯಿಂದಾಗಿ ಈ ಪ್ರಕರಣದಲ್ಲಿ ಸಿಬಿಐ ಮಧ್ಯಪ್ರವೇಶಿಸಿದೆ.

Latest Indian news

Popular Stories