ಬೆಂಗಳೂರು: ಸಂಸದೆ ಸುಮಲತಾ ನನ್ನ ಸಹೋದರಿ. ಆಕೆಯ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಪಾಪ ಆ ಹೆಣ್ಣುಮಗಳ ಬಗ್ಗೆ ಮಾತಾಡಿಲ್ಲ ಕಣ್ರಿ. ಯಾಕೆ ಆ ಹೆಣ್ಣುಮಗಳ ಬಗ್ಗೆ ಮಾತಾಡೋಣ. ಆಕೆ ನನ್ನ ಸಹೋದರಿ ಹಾಗೂ ಸಂಸದೆನಾನು ಒಂದು ದಿನವೂ ಅವರ ಬಗ್ಗೆ ಮಾತನಾಡಿಯೇ ಇಲ್ಲ ಎಂದು ಸಮರ್ಥಿಸಿಕೊಂಡರು.
ಸುಮಲತಾ ಅವರು ಬಿಜೆಪಿ ಅಸೋಸಿಯೇಟ್ ಎಂದು ಡಿ.ಕೆ.ಶಿವಕುಮಾರ್ ಇತ್ತೀಚೆಗೆ ಆರೋಪ ಮಾಡಿದ್ದರು. ಈ ಹೇಳಿಕೆಗೆ ತಿರುಗೇಟು ನೀಡಿದ್ದ ಸುಮಲತಾ, ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಜೊತೆ ಅಜೆಸ್ಟ್‌ಮೆಂಟ್ ಪಾಲಿಟಿಕ್ಸ್ ಮಾಡುವ ಮೂಲಕ ಡಿ ಕೆ ಶಿವಕುಮಾರ್ ನನ್ನನ್ನು ದೂರುತ್ತಿದ್ದಾರೆ ಸುಮಲತಾ ಹೇಳಿದ್ದರು.
ಇನ್ನು ನಟ ಸುದೀಪ್ ಅವರನ್ನ ಕಾಂಗ್ರೆಸ್‌ಗೆ ತರುವಂತ ಪ್ರಯತ್ನ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗೆ, ಉತ್ತರಿಸಿದ ಅವರು ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ ನಾಯಕತ್ವದಲ್ಲಿ ಯಾರಿಗೆಲ್ಲ ನಂಬಿಕೆಯಿದೆ ಅವರನ್ನೆಲ್ಲಾ ಅಹ್ವಾನಿಸುತ್ತೇವೆ ಎಂದು ಹೇಳಿದ್ದಾರೆ.
ಜ.16 ರಂದು ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿ ರಾಜ್ಯದ ನಾಯಕಿಯರನ್ನು ಭೇಟಿ ಮಾಡುತ್ತಿದ್ದಾರೆ. ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ, ಆಸ್ತಿ ಎಂದು ನಾ ನಾಯಕಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಪ್ರತಿ ಪಂಚಾಯ್ತಿಯಿಂದಲೂ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಬೇಕು ಎಂದರು.