“ನಮ್ಮ ದೇಶದಲ್ಲಿ ಇರುವವರು ಪಾಲನೆ ಮಾಡುವವರ ಧರ್ಮ ಯಾವುದೇ ಆಗಿರಲಿ, ಅವರ ಮೂಲತಃ ಹಿಂದೂಗಳೇ”: ಮೋಹನ್‌ ಭಾಗವತ್‌

ಪ್ರಯಾಗ್‌ರಾಜ್‌/ಪಾಟ್ನಾ: ಭಾರತದಲ್ಲಿ ವಾಸಿಸುವವರು ಎಲ್ಲರೂ ಹಿಂದೂಗಳೇ ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಬಿಹಾರದ ದರ್ಭಾಂಗದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ನಮ್ಮ ದೇಶದಲ್ಲಿ ಇರುವವರು ಪಾಲನೆ ಮಾಡುವವರ ಧರ್ಮ ಯಾವುದೇ ಆಗಿರಲಿ. ಅವರ ಮೂಲತಃ ಹಿಂದೂಗಳೇ ಆಗಿದ್ದಾರೆ. ದೇಶದ ಪ್ರತಿಯೊಬ್ಬರನ್ನೂ ಒಂದು ಎಂದು ಪರಿಗಣಿಸುವುದು ನಮ್ಮ ಕನಸು’ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಮಾತನಾಡಿದ ಅವರು, ರವೀಂದ್ರನಾಥ ಠಾಗೋರ್‌, ಮಹಾತ್ಮಾ ಗಾಂಧಿ, ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಧರ್ಮದ ಮೂಲಕವೇ ಸಮಾಜಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ ಎಂದರು. ಧರ್ಮ ಎಂದರೆ ಎಲ್ಲರನ್ನೂ ಜತೆಗೆ ಸೇರಿಕೊಂಡು ಮುನ್ನಡೆಯುವುದು ಮತ್ತು ಉದ್ಧರಿಸುವುದೇ ಆಗಿದೆ. ಬಲಶಾಲಿಯಾಗಿ ಇರುವವರು ದುರ್ಬಲರನ್ನು ರಕ್ಷಿಸಬೇಕು’ ಎಂದರು.

Latest Indian news

Popular Stories

error: Content is protected !!