ನರಭಕ್ಷಕ ಹುಲಿಗೆ ಬಾಲಕ ಮೃತ್ಯು

ಘೋರ ದುರಂತಕ್ಕೆ ಗ್ರಾಮಸ್ಥರ ಪ್ರತಿಭಟನೆ

ಹೆಚ್‌ .ಡಿ ಕೋಟೆ ತಾಲ್ಲೂಕಿನ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ದುರ್ಘಟನೆಯೊಂದು ವರದಿಯಾಗಿದ್ದು ಬಾಲಕನೊಬ್ಬ ಹುಲಿ ದಾಳಿಗೆ ಬಲಿಯಾಗಿದ್ದಾನೆ.

ತಾಲ್ಲೂಕಿನ ಕಲ್ಲಟ್ಟಿ ಗ್ರಾಮದ ನಿವಾಸಿ ಕೃಷ್ಣ ನಾಯಕ್‌ ಅವರ ಪುತ್ರ ಚರಣ್‌ ನಾಯಕ್‌ (9) ಹುಲಿ ದಾಳಿಗೆ ಬಲಿಯಾದ ದುರ್ದೈವಿ

ಕೃಷ್ಣ ನಾಯಕ್‌ ಅವರ ಜಮೀನಿನಲ್ಲಿ ಮೆಣಸು ಕೊಯ್ಲು ಕಾರ್ಯ ನಡೆಯುತ್ತಿದ್ದ ಸಂದರ್ಭ ಪುತ್ರ ಚರಣ್‌ ನಾಯಕ್‌ ನನ್ನು ಕಾವಲಿಗೆ ಕುಳ್ಳಿರಿಸಿ ತೆರಳಿದ್ದರು.

ಈ ಸಂದರ್ಭ ಬಾಲಕ ಚರಣ್‌ ನಾಯಕ್‌ ಮೇಲೆ ದಾಳಿ ನಡೆಸಿದ ಹುಲಿ
ಬಾಲಕನ ಬಲತೊಡೆ ಮತ್ತು ಹಿಂಬದಿಯನ್ನು ತಿಂದು ಹಾಕಿದೆ.

ಬಾಲಕನ ಅರಚಾಟ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ತೆರಳಿದ ಸಂದರ್ಭ ಹುಲಿ ಕಾಲ್ಕಿತ್ತಿದ್ದು ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶದಿಂದ ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಅನಿಲ್‌ ಚಿಕ್ಕಮಾದು, ಡಿ.ಸಿ.ಎಫ್‌, ಹರ್ಷಕುಮಾರ್‌ , ಎಸಿಎಫ್‌ ರಂಗಸ್ವಾಮಿ, ಡಿ.ವೈ.ಎಸ್‌.ಪಿ. ಮಹೇಶ್‌ ಪರಿಶೀಲನೆ ನಡೆಸಿದರು. ಆರ್‌.ಎಫ್‌ ಓ ಹರ್ಷಿತ್‌ ಅಮಾನತ್ತುಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest Indian news

Popular Stories