ನಾವು ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದ ಎಲ್ಲಾ ಮದರಸಾಗಳನ್ನೂ ಮುಚ್ಚುತ್ತೇವೆ – ಬಿಜೆಪಿ ಶಾಸಕ ಯತ್ನಾಳ್

ಬೆಳಗಾವಿ: ಇಲ್ಲಿನ ಶಹಾಪುರದ ಶಿವಾಜಿ ಉದ್ಯಾನದ ಬಳಿ ಗುರುವಾರ ನಡೆದ ‘ಶಿವಚರಿತಾರಿ’ ಕಲಾಕೃತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ , ‘ಮತ್ತೆ ಅಧಿಕಾರಕ್ಕೆ ಬಂದರೆ ಅಸ್ಸಾಂನಲ್ಲಿ ಮದರಸಾಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಂತೆ. ರಾಜ್ಯದ ಎಲ್ಲಾ ಮದರಸಾಗಳನ್ನು ಮುಚ್ಚಲಾಗುವುದು ಎಂದಿದ್ದಾರೆ.

ಟಿಪ್ಪು ಸುಲ್ತಾನ್ ಹಿಂದೂಗಳನ್ನು ಮತಾಂತರಗೊಳಿಸಿದನು ಮತ್ತು ಅವನ ಸೈನ್ಯವು ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರವೆಸಗಿತು. ಶಿವಾಜಿ ಮಹಾರಾಜರು ಮುಸ್ಲಿಂ ಮಹಿಳೆಯರತ್ತ ನೋಡಿಲ್ಲ ಎಂಬ ಇತಿಹಾಸವನ್ನು ದೇಶದ ನಾಲಾಯಕ್ ಬುದ್ಧಿಜೀವಿಗಳು ಮತ್ತು ಟಿಪ್ಪು ಪರ ಮಾತನಾಡುವವರಿಗೆ ತಿಳಿಯಬೇಕು.

ರೈಲು ನಿಲ್ದಾಣದಲ್ಲಿ ಉರ್ದು ಬೋರ್ಡ್ ಇದ್ದರೆ, ಅವರು ಶಾಂತವಾಗಿರುತ್ತಾರೆ. ಆದರೆ ಹಿಂದಿ ಬೋರ್ಡ್ ನೋಡಿಕೊಂಡು ಎಲ್ಲವನ್ನು ಮಾತನಾಡಿಕೊಳ್ಳುತ್ತಲೇ ಇರುತ್ತಾರೆ. ಶಕ್ತಿ ಇದ್ದರೆ ಉರ್ದು ಬೋರ್ಡ್ ಗಳನ್ನು ತೆಗೆಯಿರಿ’ ಎಂದು ಸವಾಲು ಹಾಕಿದರು.

ಈ ವೇಳೆ ಮಾತನಾಡಿದ ಅಸ್ಸಾಂ ಸಿಎಂ ಹೇಮಂತ್ ಬಿಸ್ವಾ ಶರ್ಮಾ, ಇಡೀ ದೇಶ ಔರಂಗಜೇಬ್ ಕೈಯಲ್ಲಿತ್ತು ಎಂದು ಕಮ್ಯುನಿಸ್ಟ್ ಇತಿಹಾಸಕಾರರು ಬರೆದಿದ್ದಾರೆ. ಆದರೆ ಶಿವಾಜಿ ಮಹಾರಾಜರು ಔರಂಗಜೇಬನಿಗಿಂತ ನೂರು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದರು. ಈ ದೇಶದ ಇತಿಹಾಸ ಬಾಬರ್ ಮತ್ತು ಔರಂಗಜೇಬನದು ಎಂದು ಹೇಳುವ ಕಮ್ಯುನಿಸ್ಟರ ಇತಿಹಾಸ ಸುಳ್ಳು. ವಾಸ್ತವವಾಗಿ, ಶಿವಾಜಿ, ಸ್ವಾಮಿ ವಿವೇಕಾನಂದ, ಮತ್ತು ಗುರು ಗೋಬಿಂದ್ ಸಿಂಗ್ ಭಾರತದ ಇತಿಹಾಸಗಳು’ ಎಂದು ಅವರು ಹೇಳಿದರು.

ಭಾರತವು ಪ್ರಾಚೀನ ಹಿಂದೂ ದೇಶ. ಸೂರ್ಯ ಮತ್ತು ಚಂದ್ರರು ಇರುವವರೆಗೂ ಅದು ಶಾಶ್ವತ ಹಿಂದೂ ದೇಶವಾಗಿ ಉಳಿಯುತ್ತದೆ. ಸನಾತನ ಧರ್ಮದಿಂದಾಗಿ ಸರಕಾರ ಸದೃಢವಾಗಿದೆ. ನಾವೆಲ್ಲರೂ ಹಿಂದುಗಳು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬೇಕು.

ಮಹಾತ್ಮಾ ಗಾಂಧಿ, ಡಾ.ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ, ಛತ್ರಪತಿ ಶಿವಾಜಿ ಮುಂತಾದವರು ಈ ಪುಣ್ಯಭೂಮಿಗೆ ಬಂದಿದ್ದಾರೆ. “ನಾನು ತೀರ್ಥಯಾತ್ರೆಯಲ್ಲಿದ್ದೇನೆ” ಎಂದು ಅವರು ಸಂತೋಷದಿಂದ ಹೇಳಿದರು.

Latest Indian news

Popular Stories