ನೆಹರು ಓಲೇಕಾರ ಬಿಜೆಪಿಗೆ ಗುಡ್ ಬೈ: ಟಿಕೆಟ್ ದೊರೆಯದೆ ಪಕ್ಷ ತೊರೆದ ಶಾಸಕರ ಸಂಖ್ಯೆ 5ಕ್ಕೆ ಏರಿಕೆ!

ಹಾವೇರಿ: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ನೆಹರು ಓಲೇಕಾರ ಗುರುವಾರ ಪಕ್ಷ ತೊರೆಯುವುದಾಗಿ ಹೇಳಿದ್ದಾರೆ. 

65 ವರ್ಷ ವಯಸ್ಸಿನ ಪರಿಶಿಷ್ಟ ಜಾತಿ ಸಮುದಾಯದಿಂದ ಎರಡು ಬಾರಿ ಶಾಸಕರಾಗಿದ್ದ ಅವರು ಚುನಾವಣೆಯಲ್ಲಿ ಪಕ್ಷ ತಮ್ಮನ್ನು ಕಡೆಗಣಿಸಿರುವುದನ್ನು ವಿರೋಧಿಸಿ ತಮ್ಮ ಬೆಂಬಲಿಗರೊಂದಿಗೆ  ಪ್ರತಿಭಟನೆಗೆ ಇಳಿದಿದ್ದಾರೆ.

ಹೀಗೆ ಟಿಕೆಟ್ ದೊರೆಯದೆ ಬಿಜೆಪಿ ಪಕ್ಷ ತೊರೆಯುತ್ತಿರುವ ಐದನೇ ಶಾಸಕ ನೆಹರು ಒಲೇಕಾರ್ ಆಗಿದ್ದಾರೆ. ಇದಕ್ಕೂ ಮುನ್ನಾ ಟಿಕೆಟ್ ವಂಚಿತ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ, ಅವರು ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಮತ್ತೋರ್ವ ಶಾಸಕ ಲಕ್ಷ್ಮಣ ಸವದಿ ರಾಜೀನಾಮೆ ಘೋಷಿಸಿದ್ದಾರೆ. ವಿಧಾನಪರಿಷತ್ ಸದಸ್ಯರಾಗಿದ್ದ ಆರ್. ಶಂಕರ್ ಕೂಡಾ ರಾಜೀನಾಮೆ ನೀಡಿದ್ದಾರೆ.

ಹಾವೇರಿ ಪರಿಶಿಷ್ಟ ಜಾತಿ ಮೀಸಲಿ ಕ್ಷೇತ್ರದಲ್ಲಿ ನೆಹರು ಓಲೇಕಾರ್ ಬದಲಿಗೆ ಗವಿಸಿದ್ದಪ್ಪ ದ್ಯಾಮಣ್ಣನವರ್‌ ಅವರನ್ನು ಆಯ್ಕೆ ಮಾಡಲಾಗಿದೆ.  ಸಾವಿರಾರು ಬಿಜೆಪಿ ಕಾರ್ಯಕರ್ತರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಓಲೇಕಾರ ಹೇಳಿದ್ದಾರೆ.

ಕಾರ್ಯಕರ್ತರ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದೇನೆ. ಅವರೊಂದಿಗಿನ ಸಭೆ ನಂತರ ಭವಿಷ್ಯದ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇನೆ. ಜೆಡಿಎಸ್ ಮತ್ತು ಇನ್ನೊಂದು ಪಕ್ಷದಿಂದ ತನಗೆ ಆಫರ್ ಬಂದಿದೆ ಎಂದು ಅವರು ತಿಳಿಸಿದ್ದಾರೆ. 

Latest Indian news

Popular Stories