ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆ – ತನಿಖೆ

ತಿರುವನಂತಪುರಂ: ಮದರಸಾದಲ್ಲಿ ಅಪ್ರಾಪ್ತ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ.

ಮೃತರನ್ನು ಬೀಮಾಪಲ್ಲಿ ಮೂಲದ ಅಸ್ಮಿಯಾ ಮೋಲ್ (17) ಎಂದು ಗುರುತಿಸಲಾಗಿದೆ.

ತನ್ನ ಅಧ್ಯಯನವನ್ನು ಮುಂದುವರಿಸಲು ವಸತಿ ಮದರಸಾರಲ್ಲಿ ವಾಸವಾಗಿದ್ದ ಅಸ್ಮಿಯಾ ಮೋಲ್ ಇತ್ತೀಚೆಗೆ ಹಬ್ಬಕ್ಕೆ ಮನೆಗೆ ಭೇಟಿ ನೀಡಿದಾಗ ಮನೆಯವರ ಬಳಿ ಮದರಸಾದಲ್ಲಿನ ಕಿರುಕುಳದ ಬಗ್ಗೆ ಹೇಳಿದ್ದಳು.

ಇತ್ತೀಚೆಗೆ ಮಧ್ಯರಾತ್ರಿ ಯುವತಿ ತನ್‌ ತಾಯಿಗೆ ಕರೆ ಮಾಡಿ ಕೂಡಲೇ ಮದರಸಾಕ್ಕೆ ಬನ್ನಿಯೆಂದು ಹೇಳಿದ್ದಾಳೆ. ಮನೆಯವರು ಭೀತಿಯಿಂದ ಮದರಸಾಕ್ಕೆ ತೆರಳಿದ್ದಾರೆ. ಆದರೆ ಮದರಾಸದ ಅಧಿಕಾರಿಗಳು ಅವರನ್ನು ಒಳಗೆ ಹೋಗಲು ಬಿಟ್ಟಿಲ್ಲ. ಕೆಲ ಸಮಯದ ಬಳಿಕ ನಿಮ್ಮ ಮಗಳು ಬಾತ್‌ ರೂಮ್‌ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮನೆಯವರಿಗೆ ಮದರಾಸದ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ತಮ್ಮ ಮಗಳಿಗೆ ಮದರಾಸದ ಅಧಿಕಾರಿಗಳು ಕಿರುಕುಳ ನೀಡಿದ್ದಾರೆ ಎಂದು ಯುವತಿಯ ಮನೆಯವರು ಆರೋಪಿಸಿದ್ದಾರೆ.

Latest Indian news

Popular Stories