ನೇಮಕವಾಗದ ವಿರೋಧ ಪಕ್ಷದ ನಾಯಕ: ರಾಜ್ಯ ವಿಧಾನಸಭೆಯ ಭವ್ಯ ಪರಂಪರೆಗೆ ಮೊದಲ ಬಾರಿ ಅಂಟಿದ ಕಪ್ಪು ಚುಕ್ಕೆ – ಕಾಂಗ್ರೆಸ್

ಬೆಂಗಳೂರು: ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಿ ಒಂದು ವಾರ ಕಳೆದರೂ, ಬಿಜೆಪಿ ವರಿಷ್ಠರು ಇನ್ನೂ ನಿರ್ಧಾರ ಕೈಗೊಳ್ಳದ ಕಾರಣ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಿಲ್ಲ.

ಆಡಳಿತಾರೂಢ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಟೀಕಿಸಿದ್ದು, ಪ್ರಜಾಪ್ರಭುತ್ವ ವಿರೋಧಿ ಎಂದು ಬಣ್ಣಿಸಿದೆ. ವಿರೋಧ ಪಕ್ಷದ ನಾಯಕರಿಲ್ಲದೇ ರಾಜ್ಯಪಾಲರ ಭಾಷಣ ನಡೆದಿದೆ, ಬಜೆಟ್ ಮಂಡನೆಯಾಗಿ ಒಂದು ವಾರ ಕಳೆದರೂ ವಿರೋಧ ಪಕ್ಷದ ನಾಯಕನ ನೇಮಕವಾಗದಿರುವುದು ದುರಾದೃಷ್ಟ ಎಂದಿದೆ.

ಕರ್ನಾಟಕ ವಿಧಾನಸಭೆಯ ಭವ್ಯ ಪರಂಪರೆಗೆ ಇಂತಹ ಕಪ್ಪುಚುಕ್ಕೆ ಅಂಟಿಕೊಂಡಿರುವುದು ಇದೇ ಮೊದಲು. ವಿರೋಧ ಪಕ್ಷದ ನಾಯಕನನ್ನು ನೇಮಿಸದೆ ಬಿಜೆಪಿಯು ಪ್ರಜಾಪ್ರಭುತ್ವ ವ್ಯವಸ್ಥೆ, ಕರ್ನಾಟಕದ ಜನತೆ ಮತ್ತು ಸದನದ ಪಾವಿತ್ರ್ಯವನ್ನು ಅಗೌರವಗೊಳಿಸುತ್ತಿದೆ. ರಾಜಕೀಯ ವ್ಯವಸ್ಥೆಯಲ್ಲಿ ಜನರಲ್ಲಿ ಅಪನಂಬಿಕೆ  ಉಂಟುಮಾಡುತ್ತಿದೆ ಎಂದು ಆರ್‌ಡಿಪಿಆರ್ ಮತ್ತು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಆಡಳಿತ ಪಕ್ಷವಾಗಿ ಮಾತ್ರವಲ್ಲ, ವಿರೋಧ ಪಕ್ಷವಾಗಿಯೂ ಜವಾಬ್ದಾರಿಯುತವಾಗಿ ನಡೆದುಕೊಳ್ಳುವಲ್ಲಿ ಬಿಜೆಪಿ ಸೋತಿದೆ. ವಿಪಕ್ಷ ನಾಯಕನನ್ನು ನೇಮಿಸದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ, ಕರ್ನಾಟಕದ ಜನತೆಗೆ, ಸದನದ ಪಾವಿತ್ರ್ಯತೆಗೆ ಅವಮಾನಕರವಾಗಿ ನಡೆದುಕೊಂಡು ರಾಜಕೀಯ ವ್ಯವಸ್ಥೆಯ ಮೇಲೆ ಜನರಲ್ಲಿ ಅಪನಂಬಿಕೆ ಮೂಡಿಸುತ್ತಿದೆ ಬಿಜೆಪಿ.

Latest Indian news

Popular Stories