ನ್ಯಾಯ ವಿಲೇವಾರಿಯಲ್ಲಿ ವಿಳಂಬ ಈ ದೇಶದ ಜನರು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಒಂದು – ಪ್ರಧಾನಿ ನರೇಂದ್ರ ಮೋದಿ

ಕೆವಾಡಿಯಾ: ನ್ಯಾಯ ವಿಲೇವಾರಿಯಲ್ಲಿ ವಿಳಂಬ ಈ ದೇಶದ ಜನರು ಎದುರಿಸುತ್ತಿರುವ ಬಹುದೊಡ್ಡ ಸವಾಲುಗಳಲ್ಲಿ ಒಂದು ಎಂದು ಪ್ರಧಾನಿ ನರೇಂದ್ರ ಮೋದಿ ವಿಷಾದ ವ್ಯಕ್ತಪಡಿಸಿದ್ದಾರೆ.


ಎರಡು ದಿನಗಳ ಅಖಿಲ ಭಾರತ ಕಾನೂನು ಸಚಿವರುಗಳು ಮತ್ತು ಕಾನೂನು ಕಾರ್ಯದರ್ಶಿಗಳ ಸಮ್ಮೇಳನವನ್ನು ಉದ್ಘಾಟಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ಕಾನೂನುಗಳನ್ನು ಸ್ಪಷ್ಟ ರೀತಿಯಲ್ಲಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬೇಕು, ಇದರಿಂದ ಬಡವರು, ಅನಕ್ಷರಸ್ಥರು ಕೂಡ ಅರ್ಥಮಾಡಿಕೊಳ್ಳಬಹುದು ಎಂದಿದ್ದಾರೆ.

ಗುಜರಾತ್ ನ ಕೆವಾಡಿಯಾದ ಐಕ್ಯತೆಯ ಮೂರ್ತಿಯ ಸಮೀಪವಿರುವ ಎಕ್ತಾ ನಗರ್ ನಲ್ಲಿ ಸಮ್ಮೇಳನವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ನ್ಯಾಯದಾನದಲ್ಲಿ ವಿಳಂಬತೆ ಈ ದೇಶದ ನಾಗರಿಕರು ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿ ಇದರಿಂದ ಹೊರಬರಲು ಅನೇಕ ಪರಿಹಾರ ಮತ್ತು ಕ್ರಮಗಳನ್ನು ಸೂಚಿಸಿದರು.

ಭಾರತೀಯ ಸಮಾಜದ ವಿಶೇಷತೆಯೆಂದರೆ ಸಾವಿರಾರು ವರ್ಷಗಳವರೆಗೆ ಅಭಿವೃದ್ಧಿಯ ಪಥದಲ್ಲಿ ಸಾಗುವಾಗ ಆಂತರಿಕ ಸುಧಾರಣೆಗಳನ್ನು ಕೂಡ ಜೊತೆಗೆ ಕೊಂಡೊಯ್ದಿದೆ. ನಮ್ಮ ಸಮಾಜವು ಬಳಕೆಯಲ್ಲಿಲ್ಲದ ಕಾನೂನುಗಳು, ಕೆಟ್ಟ ಪದ್ಧತಿಗಳು ಮತ್ತು ಸಂಪ್ರದಾಯಗಳನ್ನು ಸ್ವಯಂಪ್ರೇರಣೆಯಿಂದ ತೊಡೆದುಹಾಕಿದೆ. ಅವು ಪೂರ್ವಾಗ್ರಹಪೀಡಿತವಾಗಿದ್ದು ಸಮಾಜದ ಪ್ರಗತಿಗೆ ಹಿನ್ನಡೆಯಾಗಿವೆ ಎಂದು ಹೇಳಿದರು.

Latest Indian news

Popular Stories