ಪಂಜಾಬ್ ಸರ್ಕಾರ ಬೀಳಿಸುವ ಉದ್ದೇಶ; ಪ್ರಧಾನಿ ಮೋದಿಯ ಜೀವ ಬೆದರಿಕೆ ಒಂದು ಗಿಮಿಕ್: ಸಿಎಂ ಚನ್ನಿ

ಅಮೃತಸರ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೀವ ಬೆದರಿಕೆ ಇಲ್ಲ. ಭದ್ರತಾ ಲೋಪ ವಿಚಾರ ಒಂದು ಗಿಮಿಕ್. ರಾಜ್ಯದಲ್ಲಿ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾಗಿರುವ ಸರ್ಕಾರವನ್ನು ಬೀಳಿಸುವ ಉದ್ದೇಶ ಎಂದು ಚರಣ್‌ಜಿತ್ ಸಿಂಗ್ ಚನ್ನಿ ಹೇಳಿದರು.

ಪ್ರಧಾನಿ ಮೋದಿ ಇದ್ದ ಜಾಗದಿಂದ ಪ್ರತಿಭಟನಾಕಾರರು ಒಂದು ಕಿಲೋಮೀಟರ್ ದೂರದಲ್ಲಿದ್ದರು. ಈಗಿರುವಾಗ ಪ್ರಧಾನಿಗೆ ಜೀವ ಬೆದರಿಕೆ ಹೇಗೆ ಎಂದು ಮುಖ್ಯಮಂತ್ರಿ ಹೇಳಿದರು. ಪ್ರಧಾನಿಯವರ ಬೆಂಗಾವಲು ಪಡೆ ಎಲ್ಲಿ ನಿಂತಿತೋ ಅಲ್ಲಿ ಘೋಷಣೆ ಕೂಡ ಕೂಗಿಲ್ಲ. ಯಾವುದೇ ಕಲ್ಲು ತೂರಿಲ್ಲ ಅಥವಾ ಯಾರೂ ಅವರನ್ನು ತಲುಪಿಲ್ಲ, ಅವರ ಜೀವಕ್ಕೆ ಹೇಗೆ ಅಪಾಯವಿದೆ ಎಂದು ಚನ್ನಿ ಕೇಳಿದ್ದಾರೆ.

ನಿನ್ನೆ ಫಿರೋಜ್‌ಪುರದಲ್ಲಿ ಪ್ರಧಾನಿ ಬೆಂಗಾವಲು ಪಡೆ ಎದುರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ತಮ್ಮ ಪೊಲೀಸರು ಬಲಪ್ರಯೋಗ ಮಾಡಿದ್ದರೆ ಅದು ಮತ್ತೊಂದು ಬಾರ್ಗಾದಿಯಂತಹ ಘಟನೆಯಾಗುತ್ತಿತ್ತು ಎಂದು ಹೋಶಿಯಾರ್‌ಪುರದಲ್ಲಿ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ. ಹೀಗೆ ಮಾಡಿದ್ದರೆ ಆಗ ಬಾದಲ್ ಮತ್ತು ನಮಗೂ ಯಾವುದೇ ವ್ಯತ್ಯಾಸವಿಲ್ಲ ಎಂದರು.

ಪ್ರತಿಭಟನಾಕಾರರನ್ನು ತಿಳುವಳಿಕೆ ಮತ್ತು ಭರವಸೆಯೊಂದಿಗೆ ಮನವೊಲಿಸಬೇಕಾಗಿರುವಾಗ ನಾವು ಬಲಪ್ರಯೋಗ ಮಾಡಬೇಕು ಎಂದು ಕೇಂದ್ರವು ಏಕೆ ನಿರೀಕ್ಷಿಸುತ್ತದೆ. ಪ್ರತಿಭಟನಾಕಾರರು ಪ್ರಧಾನಿಯಿಂದ ಕನಿಷ್ಠ ಒಂದು ಕಿಮೀ ದೂರದಲ್ಲಿದ್ದರು. ಈಗಿರುವಾಗ ಅವರು ಹೇಗೆ ಬೆದರಿಕೆ ಹಾಕುತ್ತಾರೆ ಎಂದು ಅವರು ನಮ್ಮ ಹಣಕಾಸು ಸಚಿವ ಮನ್‌ಪ್ರೀತ್ ಬಾದಲ್‌ಗೆ ಹೇಳಿದ್ದರು.

ಪಂಜಾಬ್ ಸಿಎಂ ಆಗಿರುವವರೆಗೆ ಶಾಂತಿಯುತ ಪ್ರತಿಭಟನಾಕಾರರ ಮೇಲೆ ಒಂದೇ ಒಂದು ಗುಂಡು ಹಾರಿಸುವುದಿಲ್ಲ ಮತ್ತು ಯಾವುದೇ ಲಾಠಿ ಅಥವಾ ಬಲಪ್ರಯೋಗ ಮಾಡುವುದಿಲ್ಲ, ಆದರೆ ಮಾತುಕತೆಯ ಮೂಲಕ ಮನವೊಲಿಸಲಾಗುವುದು ಎಂದಿರುವ ಚನ್ನಿ ಪ್ರಧಾನಿ ಪಂಜಾಬ್ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು.

ದೇಶದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತೆಗಾಗಿ ಪಂಜಾಬಿಗಳು ಯಾವಾಗಲೂ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅವರು ಎಂದಿಗೂ ಪ್ರಧಾನಿಯ ಜೀವನ ಮತ್ತು ಭದ್ರತೆಗೆ ಯಾವುದೇ ಬೆದರಿಕೆಯನ್ನು ಒಡ್ಡಲು ಸಾಧ್ಯವಿಲ್ಲ ಎಂದು ಚನ್ನಿ ಹೇಳಿದರು.

Latest Indian news

Popular Stories

error: Content is protected !!