ಪಟಾಕಿಗೆ ಸಂಪೂರ್ಣ ನಿಷೇಧ ಸಾಧ್ಯವಿಲ್ಲ – ಸುಪ್ರೀಮ್ ಕೋರ್ಟ್

ಹೊಸದಿಲ್ಲಿ: “ಪಟಾಕಿಗಳಿಗೆ ಸಂಪೂರ್ಣವಾಗಿ ನಿಷೇಧ ಹೇರಲು ಸಾಧ್ಯವಿಲ್ಲ.’ ದೀಪಾವಳಿ ಹಬ್ಬಕ್ಕೂ ಮುನ್ನವೇ ಇಂಥದ್ದೊಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ದೇಶದ ಸರ್ವೋಚ್ಚ ನ್ಯಾಯಾಲಯ. ಪಶ್ಚಿಮ ಬಂಗಾಳದಲ್ಲಿ ಕಾಳಿ ಪೂಜೆ, ದೀಪಾವಳಿ, ಕ್ರಿಸ್ಮಸ್‌ ಸೇರಿದಂತೆ ಈ ವರ್ಷ ಎಲ್ಲ ಹಬ್ಬಗಳಲ್ಲೂ ಪಟಾಕಿಗೆ ಸಂಪೂರ್ಣ ನಿಷೇಧ ಹೇರಿ ಕಲ್ಕತ್ತಾ ಹೈಕೋರ್ಟ್‌ ಹೊರಡಿಸಿದ್ದ ಆದೇಶವನ್ನು ರದ್ದು ಮಾಡುವ ವೇಳೆ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪಟಾಕಿಗಳಿಗೆ ಸಂಪೂರ್ಣವಾಗಿ ನಿಷೇಧ ಹೇರಲಾಗದು. ಅದರ ಬದಲಿಗೆ ಹಸಿರು ಪಟಾಕಿ ಸಿಡಿಸಲು ಅನುಮತಿ ನೀಡಿ. ಜತೆಗೆ, ನಿಷೇಧಿತ ಪಟಾಕಿಗಳು ಮತ್ತು ಅದಕ್ಕೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ರಾಜ್ಯಕ್ಕೆ ತರದಂತೆ ಸೂಕ್ತ ಕ್ರಮ ಕೈಗೊಳ್ಳಿ’ ಎಂದು ಪ.ಬಂಗಾಲ ಸರ್ಕಾರಕ್ಕೆ ಸೂಚಿಸಿದೆ.

Latest Indian news

Popular Stories

error: Content is protected !!