ಪಡಿತರದಲ್ಲಿ ಕುಚಲಕ್ಕಿ ವಿತರಣೆ: ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಕರಾವಳಿ ಪ್ರದೇಶದ ದೈನಂದಿನ ಆಹಾರದಲ್ಲಿ ಕುಚಲಕ್ಕಿಗೆ ಪ್ರಧಾನ ಸ್ಥಾನ. ಇದಿಲ್ಲದ ಊಟವನ್ನು ಅವರು ಕಲ್ಪಿಸಿಕೊಳ್ಳಲಾರರು. ಇದನ್ನರಿತ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಡಿತರದಲ್ಲಿ ಕುಚಲಕ್ಕಿ ವಿತರಣೆ ಮಾಡಲು ಆದೇಶಿಸಿದೆ.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಬರೆದ ಪತ್ರಕ್ಕೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಶೀಘ್ರ ಸ್ಪಂದಿಸಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯ ಸರಕಾರಕ್ಕೆ ನೀಡುವ ಪಡಿತರ ಸಂಬಂಧಿತ ಧಾನ್ಯಗಳ ವಿತರಣೆಯಲ್ಲಿ ಕುಚಲಕ್ಕಿ ಸೇರಿಸಲು ಅವರು ಆದೇಶ ನೀಡಿದ್ದಾರೆ. ಇದುವರೆಗೂ ಕರಾವಳಿ ಪ್ರದೇಶದ ಪಡಿತರದಲ್ಲಿ ಕುಚಲಕ್ಕಿ ಸೇರ್ಪಡೆಯಾಗಿರಲಿಲ್ಲ. ಅಲ್ಲಿಯೂ ಬೆಳ್ತಕ್ಕಿ ವಿತರಣೆ ಮಾಡಲಾಗುತ್ತಿತ್ತು.

ರಾಜ್ಯದ ಕರಾವಳಿಯಲ್ಲಿನ ಪಡಿತರದಲ್ಲಿ ಕುಚಲಕ್ಕಿ ಸೇರಿಸುವಂತೆ ಕೇಂದ್ರ ಸರ್ಕಾರ ನೀಡಿರುವ ಆದೇಶಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, “ಪಡಿತರದಲ್ಲಿ ವಿತರಿಸಲು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬೆಳೆದ ಕುಚಲಕ್ಕಿ ನೀಡಲು ಒಪ್ಪಿಕೊಂಡಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾಕ್ಕೆ ಧನ್ಯವಾದಗಳು. ಸ್ಥಳೀಯ ಉತ್ಪನ್ನಗಳಿಗೆ ಬೆಂಬಲ ನೀಡುವ ಜೊತೆಗೆ ಫಲಾನುಭವಿಗಳಿಗೆ ಅವರ ಆಯ್ಕೆಯ ಆಹಾರ ನೀಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ” ಎಂದು ಹೇಳಿದ್ದಾರೆ.

Latest Indian news

Popular Stories

error: Content is protected !!