ಪತ್ರಕರ್ತ ಸಿದ್ದೀಕ್ ಕಪ್ಪನ್ ಲೇಖನಗಳೇ ಚಾರ್ಜ್ ಶೀಟ್’ಗೆ ಆಧಾರ ಮಾಡಿಕೊಂಡ ಪೊಲೀಸರು!

ದೆಹಲಿ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್, ಒಂದು ವರ್ಷದ ಹಿಂದೆ ದಲಿತ ಮಹಿಳೆಯ ಹತ್ಯೆಯ ನಂತರ ವರದಿಗಾಗಿ ಹತ್ರಾಸ್‌ಗೆ ಹೋಗುತ್ತಿದ್ದಾಗ ದೇಶದ್ರೋಹದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದರು.

“ಜವಾಬ್ದಾರಿಯುತ” ಪತ್ರಕರ್ತನಂತೆ ಬರೆಯಲಿಲ್ಲ. “ಮುಸ್ಲಿಮರನ್ನು ಪ್ರಚೋದಿಸುವ ವರದಿ ಮಾತ್ರ ಇತ್ತು” ಮತ್ತು “ಮಾವೋವಾದಿಗಳು ಮತ್ತು ಕಮ್ಯುನಿಸ್ಟರಿಗೆ ಸಹಾನುಭೂತಿ” ಎಂದು ಬರೆದಿದ್ದಾರೆ ಎಂದು ಯುಪಿ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಆತನ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಯಲ್ಲಿ ಈ ಕುರಿತು ಉಲ್ಲೇಖಿಸಿದೆ.

5,000 ಪುಟಗಳ ಚಾರ್ಜ್‌ಶೀಟ್ ಜನವರಿ 23, 2021 ರ ಕೇಸ್ ಡೈರಿ ಟಿಪ್ಪಣಿಯನ್ನು ಒಳಗೊಂಡಿದೆ. ಇದರಲ್ಲಿ ತನಿಖಾ ಅಧಿಕಾರಿಯು ಮಲಯಾಳಂ ಮಾಧ್ಯಮ ಸಂಸ್ಥೆಗಾಗಿ ಕಪ್ಪನ್ ಬರೆದ 36 ಲೇಖನಗಳ ಭಾಗಗಳನ್ನು ಉಲ್ಲೇಖಿಸಿದ್ದಾರೆ. ಆ ಲೇಖನಗಳಲ್ಲಿ ನಿಝಾಮುದ್ದಿನ್ ಮರ್ಕಝ್ ಕೋವಿಡ್ ವಿಚಾರ, ಸಿಎಎ ವಿರೋಧಿ ಪ್ರತತಿಭಟನೆ, ಈಶಾನ್ಯ ದೆಹಲಿ ಗಲಭೆ, ಅಯೋಧ್ಯೆಯಲ್ಲಿ ರಾಮ ಮಂದಿರ ಮತ್ತು ದೇಶದ್ರೋಹದ ಆರೋಪದ ಮೇಲೆ ಜೈಲಿನಲ್ಲಿದ್ದ ಶಾರ್ಜೀಲ್ ಇಮಾಮ್ ಕುರಿತಾದ ಲೇಖನಗಳು ಸೇರಿವೆ ಎಂಬುವುದು ವಿಶೇಷ.

ಈ ಲೇಖನಗಳಲ್ಲಿ ಒಂದನ್ನು ಉಲ್ಲೇಖಿಸಿ “AMU ನಲ್ಲಿ CAA ಪ್ರತಿಭಟನೆಯ ಸಮಯದಲ್ಲಿ ಬರೆಯಲಾಗಿದೆ” ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. “ಬರವಣಿಗೆಯಲ್ಲಿ, ಮುಸ್ಲಿಮರನ್ನು ಸಂತ್ರಸ್ಥರನ್ನಾಗಿ ಚಿತ್ರಿಸಲಾಗಿದೆ. (ಅವರು) ಪೊಲೀಸರಿಂದ ಹೊಡೆಸಿದರು. ಪಾಕಿಸ್ತಾನಕ್ಕೆ ಹೋಗುವಂತೆ ಒತ್ತಾಯಿಸಿರುವ ಕುರಿತು ಉಲ್ಲೇಖಿಸಲಾಗಿದೆ. ಮುಸ್ಲಿಮರನ್ನು ಪ್ರಚೋದಿಸಲು ಇದನ್ನು ಬರೆಯಲಾಗಿದೆ ಎಂದು ಬರವಣಿಗೆಯಿಂದ ಸ್ಪಷ್ಟವಾಗುತ್ತದೆ ಎಂದು ಚಾರ್ಜ್ ಶೀಟ್ ನಲ್ಲಿ ಪೊಲೀಸರು ಆರೋಪಿಸಿದ್ದಾರೆ.

“ಸಿದ್ದೀಕ್ ಕಪ್ಪನ್ ಅವರ ಈ ಬರಹಗಳನ್ನು ಹೆಚ್ಚಿನ ಮಟ್ಟಿಗೆ ಕೋಮುವಾದ ಪ್ರೇರಿತ ಎಂದು ವರ್ಗೀಕರಿಸಬಹುದು. ಗಲಭೆಗಳ ಸಮಯದಲ್ಲಿ, ಅಲ್ಪಸಂಖ್ಯಾತರ ಹೆಸರನ್ನು ತೆಗೆದುಕೊಳ್ಳುವುದು ಮತ್ತು ಅವರಿಗೆ ಸಂಬಂಧಿಸಿದ ಘಟನೆಗಳ ಬಗ್ಗೆ ಮಾತನಾಡುವುದು ಭಾವನೆಗಳನ್ನು ಪ್ರಚೋದಿಸುವುದು. ಜವಾಬ್ದಾರಿಯುತ ಪತ್ರಕರ್ತರು ಇಂತಹ ಕೋಮುವಾದಿ ವರದಿಗಳನ್ನು ಮಾಡುವುದಿಲ್ಲ. ಕಪ್ಪನ್ ಮುಸ್ಲಿಮರನ್ನು ಪ್ರಚೋದಿಸಲು ಮಾತ್ರ ವರದಿ ಮಾಡುತ್ತಾನೆ. ಇದು ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ದ ಗುಪ್ತ ಕಾರ್ಯಸೂಚಿಯಾಗಿದೆ. ಮಾವೋವಾದಿಗಳು ಮತ್ತು ಕಮ್ಯುನಿಸ್ಟರ ಬಗ್ಗೆ ಸಹಾನುಭೂತಿ ಹೊಂದಲು ಕೆಲವು ಕಥೆಗಳನ್ನು ಬರೆಯಲಾಗಿದೆ ಎಂದು ಆರೋಪಿಸಲಾಗಿದೆ.

Latest Indian news

Popular Stories