ಪದೇ ಪದೇ ಎದ್ದೆದ್ದು ನಿಂತು ಮಾತಾಡಿದ್ರೆ ನಿಮ್ಮನ್ನ ವಿಪಕ್ಷ ನಾಯಕ ಮಾಡುತ್ತಾರೆ ಅಂದುಕೊಂಡಿದ್ದೀರಾ? – ಯತ್ನಾಳ್’ಗೆ ಸಿ.ಎಮ್ ಟಾಂಗ್

ಬೆಂಗಳೂರು: ವಿರೋಧ ಪಕ್ಷದ ನಾಯಕನಿಲ್ಲದೇ ವಿಧಾಸಭೆ ಅಧಿವೇಶನ ನಡೆಯುತ್ತಿದ್ದು, ಇದಕ್ಕೆ ಮಾತಿನಲ್ಲೇ ಆಡಳಿತರೂಢ ಕಾಂಗ್ರೆಸ್ ನಾಯಕರು, ಬಿಜೆಪಿ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ.

ಅದರಂತೆ ಇಂದು ಸದನದಲ್ಲಿ ಪದೇ ಪದೇ ಎದ್ದೆದ್ದು ಮಾತನಾಡುತ್ತಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ಗೆ ನಿಮ್ಮನ್ನು ವಿಪಕ್ಷ ನಾಯಕನಾಗಿ ಮಾಡುತ್ತಾರೆ ಅಂದುಕೊಂಡಿದ್ದೀರಾ ಎಂದು ಕಾಲೆಳೆದರು.

ನಿಲುವಳಿ ಪ್ರಸ್ತಾವ ಮಂಡನೆ ವೇಳೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್, ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವೇಳೆ ಮಧ್ಯೆ ಪ್ರವೇಶದ ಸಿಎಂ ಸಿದ್ದರಾಮಯ್ಯ, ನಿಮ್ಮನ್ನು ವಿಪಕ್ಷ‌ ನಾಯಕರಾಗಿ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಇಲ್ಲಿ ಎದ್ದೆದ್ದು ನಿಂತು ಮಾತಾಡಿದ್ರೆ ನಿಮ್ಮನ್ನು ವಿಪಕ್ಷ ನಾಯಕ ಮಾಡುತ್ತಾರೆ ಅಂತಾ ಅಂದುಕೊಂಡಿದ್ದೀರಾ? ಎಂದು ಟಾಂಗ್ ಕೊಟ್ಟರು.

ಸದನ ಆರಂಭವಾಗಿ 3 ದಿನ ಆದರೂ ವಿಪಕ್ಷ ನಾಯಕ ಆಯ್ಕೆಯಾಗಿಲ್ಲ. ಇಲ್ಲಿ ಬಂದು ಬುರುಡೆ ಹೊಡೆಯುತ್ತಿದ್ದಾನೆ. ಅಶೋಕ್ ಮಾತಾಡುವುದು ನೋಡಿದರೆ ಮಹಿಳೆಯರಿಗೆ ಫ್ರೀ ಕೊಟ್ಟಿರುವುದನ್ನೇ ವಿರೋಧಿಸುತ್ತಿದೆ ಎಂದು ಕಿಚಾಯಿಸಿದರು.

Latest Indian news

Popular Stories