ಪರಿಷ್ಕೃತ ಮೀಸಲಾತಿ ನೀತಿ- ಸರ್ಕಾರದ ವಿರುದ್ಧ ಬ್ರಾಹ್ಮಣರ ಆಕ್ರೋಶ

ಬೆಂಗಳೂರು: ಪರಿಷ್ಕೃತ ಮೀಸಲಾತಿ ನೀತಿಗೆ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರದ ವಿರುದ್ಧ ಹೋರಾಟಕ್ಕೆ ಬ್ರಾಹ್ಮಣರು ತೀರ್ಮಾನ ಕೈಗೊಂಡಿದ್ದಾರೆ.

ಬ್ರಾಹ್ಮಣ ಮಹಾಸಭಾದಿಂದ ರಾಜ್ಯವ್ಯಾಪಿ ಹೋರಾಟ ಮಾಡಲು ನಿರ್ಧರಿಸಲಾಗಿದ್ದು, ಸರ್ಕಾರದ ನೀತಿ ಅಸಮಾಧಾನ ತಂದಿದೆ ಎಂದು ಆರೋಪ ಮಾಡಲಾಗಿದೆ.

ಮೋದಿ ಭೇಟಿ ಮಾಡಿ ಸರ್ಕಾರದ ನಿಲುವಿನ ಕುರಿತು ದೂರು ಸಲ್ಲಿಕೆಗೆ ನಿರ್ಧರಿಸಿದ್ದು, ಮೀಸಲಾತಿ ಇರುವವರಿಗೆ EWS ಮೀಸಲಾತಿ ವರ್ಗಾಯಿಸಬಾರದು ಎಂದು ಸರ್ಕಾರದ ವಿರುದ್ಧ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲೂ ಹೋರಾಟ ನಡೆಸಲು ನಿರ್ಧರಿಸಲಾಗಿದೆ.

Latest Indian news

Popular Stories