ಪರಿಹಾರ ಸಾಮಗ್ರಿಗಳೊಂದಿಗೆ ಟರ್ಕಿಯಲ್ಲಿ ಲ್ಯಾಂಡ್ ಆದ ಎರಡು ಐಎಎಫ್ ವಿಮಾನ

ನವದೆಹಲಿ: ಪ್ರಬಲ ಸರಣಿ ಭೂಕಂಪದಿಂದ ತತ್ತರಿಸಿರುವ ಟರ್ಕಿಗೆ ಭಾರತೀಯ ವಾಯುಪಡೆಯ ಎರಡು ವಿಮಾನಗಳು ಪರಿಹಾರ  ಸಾಮಗ್ರಿಗಳು, ಮೊಬೈಲ್ ಆಸ್ಪತ್ರೆ, ವಿಶೇಷ ಶೋಧ ಮತ್ತು ರಕ್ಷಣಾ ತಂಡಗಳೊಂದಿಗೆ ಟರ್ಕಿಯಲ್ಲಿ ಲ್ಯಾಂಡ್ ಆಗಿವೆ.

ಎರಡು C-17 ಗ್ಲೋಬ್‌ಮಾಸ್ಟರ್ ಮಿಲಿಟರಿ ಸಾರಿಗೆ ವಿಮಾನಗಳಲ್ಲಿ ಭಾರತ ಪರಿಹಾರ ಸಾಮಾಗ್ರಿಗಳನ್ನು ಟರ್ಕಿಗೆ ರವಾನಿಸಿದೆ. ಅಲ್ಲದೆ ಇನ್ನೂ ಎರಡು ವಿಮಾನಗಳಲ್ಲಿ ವೈದ್ಯಕೀಯ ಸಾಮಗ್ರಿಗಳು ಸೇರಿದಂತೆ ಹೆಚ್ಚಿನ ಪರಿಹಾರ ವಸ್ತುಗಳನ್ನು ಶೀಘ್ರದಲ್ಲೇ ಟರ್ಕಿಗೆ ಸಾಗಿಸುವ ನಿರೀಕ್ಷೆ ಇದೆ.

ಸೋಮವಾರ ಸಂಭವಿಸಿದ ಸರಣಿ ಭೂಕಂಪದಿಂದ ನಲುಗಿರುವ ಮತ್ತೊಂದು ದೇಶ ಸಿರಿಯಾಗೂ ಪರಿಹಾರ ಸಾಮಾಗ್ರಿಗಳನ್ನು ಸಾಗಿಸಲು ಮತ್ತೊಂದು ವಿಮಾನ ಸಿದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎನ್ ಡಿಆರ್ ಎಫ್ ತಂಡಗಳು ಮತ್ತು ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಐಎಎಫ್ ನ ಎರಡು C-17 ಗ್ಲೋಬ್‌ಮಾಸ್ಟರ್ ಹೆವಿ ಲಿಫ್ಟ್ ವಿಮಾನಗಳು ಭಾರತದಿಂದ ಟರ್ಕಿಗೆ ಹೊರಟಿವೆ. ಈ ಕಷ್ಟದ ಸಮಯದಲ್ಲಿ ಟರ್ಕಿಯ ಜನರ ಬೆಂಬಲಕ್ಕೆ ಭಾರತ ನಿಂತಿದೆ” ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ನಿನ್ನೆ ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಕಣ್ಣೆದುರೇ ಸಾವಿರಾರು ಕಟ್ಟಡಗಳು ಧರೆಗುರುಳಿವೆ.

Latest Indian news

Popular Stories