ಪುತ್ತೂರು: ಹೆಬ್ಬಾವನ್ನು ಕೊಂದ ಇಬ್ಬರ ಬಂಧನ

ಪುತ್ತೂರು, ಜು.6: ಹೆಬ್ಬಾವನ್ನು ಕೊಂದು ಸರೀಸೃಪವನ್ನು ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ನೇತು ಹಾಕಿದ ಆರೋಪದ ಮೇಲೆ ಇಬ್ಬರನ್ನು ಪುತ್ತೂರು ಅರಣ್ಯ ಇಲಾಖೆ ಅಧಿಕಾರಿಗಳು ಕೊಳ್ತಿಗೆ ಗ್ರಾಮದ ಪೆರ್ಲಂಬಾಡಿಯಲ್ಲಿ ಬಂಧಿಸಿದ್ದಾರೆ.

ಆರೋಪಿಗಳನ್ನು ಕೊಳ್ತಿಗೆ ಗ್ರಾಮದ ಶೇಡಿಗುರಿ ನಿವಾಸಿ ಧನಂಜಯ ಮತ್ತು ಜಯ ಎಂದು ಗುರುತಿಸಲಾಗಿದೆ.

ಆರೋಪಿಗಳು ತಮ್ಮ ಮನೆಯ ಸಮೀಪ ಕಂಡ ಹೆಬ್ಬಾವನ್ನು ಕೊಂದು ಗ್ರಾಮ ಅರಣ್ಯ ಸಮಿತಿ ಕಟ್ಟಡದ ಬಾಗಿಲಿಗೆ ನೇತು ಹಾಕಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ ಕೆ ದಿನೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ ಪಿ ಕರಿಯಪ್ಪ ಅವರ ನಿರ್ದೇಶನದಂತೆ ಅರಣ್ಯಾಧಿಕಾರಿಗಳಾದ ಕಿರಣ್ ಬಿ ಎಂ, ಲೋಕೇಶ್ ಎಸ್ ಎನ್, ಅರಣ್ಯ ಸಂರಕ್ಷಣಾಧಿಕಾರಿಗಳಾದ ದೀಪಕ್, ನಿಂಗರಾಜ್, ಚಾಲಕ ಜಗದೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಆರೋಪಿಗಳನ್ನು ನ್ಯಾಯಾಲಯ ಜುಲೈ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Latest Indian news

Popular Stories