ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಮತ್ತೆ ಏರಿಕೆ

ನವದೆಹಲಿ: ಭಾನುವಾರ ಅಕ್ಟೋಬರ್ ತಿಂಗಳಾಂತ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ ಮತ್ತು ಲೀಟರ್ ಡೀಸೆಲ್ ದರದಲ್ಲಿ ಕ್ರಮವಾಗಿ 35 ಪೈಸೆ ಹೆಚ್ಚಳವಾಗಿದೆ. ಇದರಂತೆ ದೆಹಲಿಯಲ್ಲಿ ಲೀಟರ್​ ಪೆಟ್ರೋಲ್​ ದರ 109 ರೂಪಾಯಿ 34 ಪೈಸೆಗೆ ಏರಿಕೆಯಾಗಿದ್ದು, ಡೀಸೆಲ್​ ದರ ಸಹ 100ರ ಗಡಿ ತಲುಪಿ 98 ರೂಪಾಯಿ 07 ಪೈಸೆಯಾಗಿದೆ. ಇಂಧನ ದರ ಗರಿಷ್ಠ ಮಟ್ಟ ತಲುಪಿದೆ.

ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 115 ರೂಪಾಯಿ 15 ಪೈಸೆಯಾಗಿದ್ದು, ಡೀಸೆಲ್ ದರ 106 ರೂಪಾಯಿ 23 ಪೈಸೆಯಾಗಿದೆ. ಅದೇ ರೀತಿ ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 109 ರೂಪಾಯಿ 79 ಪೈಸೆಯಾಗಿದ್ದು, ಡೀಸೆಲ್ ದರ 101 ರೂಪಾಯಿ 19 ಪೈಸೆಯಾಗಿದೆ. ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ಬೆಲೆ 106 ರೂಪಾಯಿ 04 ಪೈಸೆಯಾಗಿದ್ದು, ಡೀಸೆಲ್ ಬೆಲೆ 102 ರೂಪಾಯಿ 25 ಪೈಸೆಯಾಗಿದೆ.

ಇನ್ನು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ ಗೆ 113 ರೂಪಾಯಿ 15 ಪೈಸೆಯಾಗಿದ್ದು, ಡೀಸೆಲ್ ಬೆಲೆ 104 ರೂಪಾಯಿ 09 ಪೈಸೆಯಾಗಿದೆ.

Latest Indian news

Popular Stories

error: Content is protected !!