ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್​ ತಂದಿಟ್ಟಿದ್ದಾರೆ: ಬಂಧಿತ ಜಾಹಿದ್ ತಬ್ರೇಜ್ ಸಹೋದರನ ಆರೋಪ

ಬೆಂಗಳೂರು, ಜುಲೈ 20: ನಿನ್ನೆ ಬಂಧನಕ್ಕೊಳಗಾಗಿದ್ದ ಐವರ ಪೈಕಿ ಜಾಹಿದ್ ತಬ್ರೇಜ್​ ಎಂಬಾತನ ನಿವಾಸದಲ್ಲಿ ಗ್ರೆನೇಡ್ ಪತ್ತೆಯಾಗಿದ್ದು, ಪೊಲೀಸರೇ ನಮ್ಮ ಮನೆಗೆ ಗ್ರೆನೇಡ್​ ತಂದು ಇಟ್ಟಿದ್ದಾರೆ ಎಂದು ಬಂಧಿತ ಜಾಹಿದ್​​ ತಬ್ರೇಜ್ ಸಹೋದರ ಅವೇಜ್​ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆ ಪೊಲೀಸರು ತಮ್ಮನನ್ನು ಕರೆದುಕೊಂಡು ಬಂದಿದ್ದು, ಗ್ರೆನೇಡ್​ ತಂದು ಇಟ್ಟಿದ್ದಾರೆ ಎಂದರು.

ನನ್ನ ಸಹೋದರ ಅಂತಹ ಕೆಲಸ ಮಾಡುವವನಲ್ಲ.​ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ತನ್ನಪಾಡಿಗೆ ತಾನಿದ್ದ. ನಾನು ಮತ್ತು ಸಹೋದರ ಇಬ್ಬರೇ ಮನೆಯಲ್ಲಿ ದುಡಿಯವವರು ಎಂದು ತಿಳಿಸಿದರು.

2017ರಲ್ಲಿ ಜುನೈದ್​ ಜೊತೆ ಕೇಸ್​​ವೊಂದರಲ್ಲಿ ಅರೆಸ್ಟ್​ ಆಗಿದ್ದ. ಕ್ಯಾಬ್ ಓಡಿಸುವಾಗ ಜುನೈದ್ ಕರೆದೊಯ್ದು ಹೀಗೆ ಮಾಡಿದ್ದ. ಬಳಿಕ ಜುನೈದ್​​ ಸಹವಾಸವನ್ನೇ ಜಾಹಿದ್ ತಬ್ರೇಜ್ ಬಿಟ್ಟಿದ್ದ. ನಾವು ಸಂಸಾರಸ್ಥರು, ನಾವು ಏಕೆ ಗ್ರೆನೇಡ್ ಇಟ್ಟುಕೊಳ್ಳುತ್ತೇವೆ. ನನ್ನ ತಮ್ಮ ಈ ರೀತಿಯ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.

Latest Indian news

Popular Stories