ಪೋಪ್’ರನ್ನು ಭೇಟಿಯಾಗಿ ಭಾರತಕ್ಕೆ ಆಹ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ

ವ್ಯಾಟಿಕನ್ ಸಿಟಿ: ಪೋಪ್ ಫ್ರ್ಯಾನ್ಸಿಸ್’ರನ್ನು ಭೇಟಿಯಾದ ಪ್ರಧಾನಿ ನರೇಂದ್ರ ಮೋದಿಯವರು ಅವರನ್ನು ಭಾರತಕ್ಕೆ ಆಹ್ವಾನಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದಾವಲ್ ಮತ್ತು ವಿದೇಶಾಂಗ ಸಚಿವ ಜೈ ಶಂಕರ್ ಅವರು ಪೋಪ್ ಭೇಟಿಯ ಸಂದರ್ಭದಲ್ಲಿ ಮೋದಿಯವರೊಂದಿಗೆ ಜೊತೆಯಲ್ಲಿದ್ದರು. ಇಪ್ಪತ್ತು ನಿಮಿಷಗಳ ಭೇಟಿಯ ಸಮಯವಿತ್ತು ಆದರೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ಮುಂದುವರಿಯಿತೆಂದು ವರದಿಯಾಗಿದೆ.

ಪೋಪ್’ರೊಂದಿಗೆ ಹಲವು ವಿಚಾರಗಳ ಕುರಿತಾಗಿ ಮಾತುಕತೆ ನಡೆದಿದೆ. ಅದರೊಂದಿಗೆ ಅವರನ್ನು ಭಾರತಕ್ಕೆ ಬರುವಂತೆ ಆಹ್ವಾನಿಸಲಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಈ ಮಾತುಕತೆಯಲ್ಲಿ ಹವಾಮಾನ ಬದಲಾವಣೆ, ಬಡತನ ನಿರ್ಮೂಲನೆ ಕುರಿತು ಚರ್ಚೆಗಳು ನಡೆದಿದೆ ಎನ್ನಲಾಗಿದೆ.

Latest Indian news

Popular Stories

error: Content is protected !!