ಪ್ರಧಾನಿ ಮೋದಿ, ಸಿಎಂ ಬಸವರಾಜ್ ಬೊಮ್ಮಾಯಿಗೆ 9 ಪ್ರಶ್ನೆಗಳನ್ನು ಕೇಳಿದ ಸುರ್ಜೆವಾಲ

ಮೈಸೂರು: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್​ ಸಿಂಗ್​ ಸುರ್ಜೇವಾಲ 9 ಪ್ರಶ್ನೆಗಳನ್ನು ಕೇಳಿದ್ದಾರೆ.

1. ನೀವು ಲಿಂಗಾಯತರು, ಒಕ್ಕಲಿಗರು, ಎಸ್‌ಸಿ ಮತ್ತು ಎಸ್‌ಟಿಗಳ ಮೇಲೆ “ಮೀಸಲಾತಿಯ ವಂಚನೆ ಆಟ ಏಕೆ ಆಡಿದ್ದೀರಿ?

2. ನೀವು ಸುಪ್ರೀಂ ಕೋರ್ಟ್‌ನಲ್ಲಿ ಮೀಸಲಾತಿಯನ್ನು ಏಕೆ ಸಮರ್ಥಿಸಲಿಲ್ಲ ?

3. ಮೀಸಲಾತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಅಫಿಡವಿಟ್ ಸಲ್ಲಿಸಲು ಬೊಮ್ಮಾಯಿ-ಮೋದಿ ಸರ್ಕಾರ ಏಕೆ ವಿಫಲವಾಯಿತು ?

4. ಮಾರ್ಚ್ 14, 2023 ರಂದು ಸಂಸತ್ತಿನಲ್ಲಿ ಎಸ್​ಸಿ-ಎಸ್​ಟಿಗಳಿಗೆ ಹೆಚ್ಚಿದ ಮೀಸಲಾತಿಯನ್ನು ಮೋದಿ ಸರ್ಕಾರ ಏಕೆ ತಿರಸ್ಕರಿಸಿತು ?

5. ಎಸ್​ಸಿ-ಎಸ್​ಟಿಗಾಗಿ ಹೆಚ್ಚಿದ ಮೀಸಲಾತಿಯ ಕಾನೂನನ್ನು ಕೇಂದ್ರ ಸರ್ಕಾರವು ಸಂವಿಧಾನದ IX ನೇ ಶೆಡ್ಯೂಲ್‌ನಲ್ಲಿ ಏಕೆ ಹಾಕಲಿಲ್ಲ ?

6. ಎಸ್​ಸಿ, ಎಸ್​ಟಿಗಳ ಆಕಾಂಕ್ಷೆಗಳನ್ನು ಪೂರೈಸಲು ನೀವು ಮೀಸಲಾತಿಯ ಶೇ 50 ಸೀಲಿಂಗ್ ಅನ್ನು ಹೆಚ್ಚಿಸಲು ಏಕೆ ನಿರಾಕರಿಸುತ್ತಿದ್ದೀರಿ ?

7. ಧ್ರುವೀಕರಣಕ್ಕಾಗಿ ನೀವು ಏಕೆ ಅನ್ಯಾಯವಾಗಿ ಅಲ್ಪಸಂಖ್ಯಾತರ ಮೀಸಲಾತಿಯನ್ನು ಗುರಿಯಾಗಿಸಿಕೊಂಡಿದ್ದೀರಿ?

8. ಬೊಮ್ಮಾಯಿ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಹೇಳಿಕೆ ನೀಡುವ ಮೂಲಕ ಮೀಸಲಾತಿ ಕುರಿತಾದ ತನ್ನದೆ ಆದ ಸರ್ಕಾರಿ ಆದೇಶವನ್ನು ಏಕೆ ತಡೆಹಿಡಿದಿದೆ ?

9. ಪ್ರಧಾನಮಂತ್ರಿಯವರು SC, ST ಗಳಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಾರಾ ? ಲಿಂಗಾಯತರು, ಒಕ್ಕಲಿಗರು ಮತ್ತು ಇತರರು ಮೀಸಲಾತಿ ಹೆಸರಿನಲ್ಲಿ ಬಿಜೆಪಿ ಮಾಡಿದ ದ್ರೋಹಕ್ಕಾಗಿ?

ಈ ಪ್ರಶ್ನೆಗಳನ್ನು ಎತ್ತಿ ಉತ್ತರಿಸುವಂತೆ ಆಗ್ರಹಿಸಿದ್ದಾರೆ.

Latest Indian news

Popular Stories