ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣ: 20 ಮಂದಿಯ ವಿರುದ್ಧ ಚಾರ್ಜ್ ಶೀಟ್

ನವದೆಹಲಿ: ಇತ್ತೀಚೆಗೆ ಕೇಂದ್ರ ಗೃಹ ಇಲಾಖೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯನ್ನು ನಿಷೇಧಿಸಿದೆ. ಈ ನಿಷೇಧಿತ ಸಂಘಟನೆ ದೇಶದಲ್ಲಿ ಕೋಮು ದ್ವೇಷ, ಉಗ್ರಗಾಮಿ ಚಟುವಟಿಕೆ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸಿ ಅನಿಶ್ಚಿತತೆ ಹುಟ್ಟುಹಾಕುವ ಉದ್ದೇಶವನ್ನು ಹೊಂದಿದ್ದು 2047ಕ್ಕೆ ಭಾರತದಲ್ಲಿ ಇಸ್ಲಾಮ್ ಆಡಳಿತವನ್ನು ತರಬೇಕೆಂಬ ಮಹದಾಸೆಯನ್ನು ಹೊಂದಿತ್ತು ಎಂಬ ಆರೋಪವನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕಾಗಿ ಸಂಘಟನೆ ಗೌಪ್ಯ ತಂಡವನ್ನು ರಚಿಸಿ ಅದಕ್ಕೆ ‘ಸರ್ವಿಸ್ ಟೀಮ್ಸ್’ ಅಥವಾ ‘ಕಿಲ್ಲರ್ ಸ್ಕ್ವಾಡ್’ ಎಂದು ಹೆಸರನ್ನಿಟ್ಟಿದ್ದು ತನ್ನ ಗ್ರಹಿಕೆಯ ಶತ್ರುಗಳ ಮೇಲೆ ಗುರಿಯಾಗಿಟ್ಟುಕೊಂಡು ಅವರನ್ನು ಕೊಲ್ಲುವ ಉದ್ದೇಶ ಹೊಂದಿದೆ ಎನ್ನಲಾಗಿದೆ.

ಈ ಆಘಾತಕಾರಿ ಮಾಹಿತಿಯನ್ನು ಬಯಲಿಗೆಳೆದದ್ದು ರಾಷ್ಟ್ರೀಯ ತನಿಖಾ ತಂಡ(NIA). ನಿನ್ನೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಮುಂದೆ ರಾಷ್ಟ್ರೀಯ ತನಿಖಾ ತಂಡ, ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಪಟ್ಟಂತೆ 20 ಪಿಎಫ್ಐ ಸದಸ್ಯರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ.

Latest Indian news

Popular Stories