ಹೊಸದಿಲ್ಲಿ: ಫೆಬ್ರವರಿ 14 ರಂದು ‘ಹಸು ತಬ್ಬಿಕೊಳ್ಳಿವ ದಿನ”‘ ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ಸಲಹೆಯನ್ನು ಬೆಂಬಲಿಸಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಗುರುವಾರ ಎಲ್ಲರೂ ಗೋವನ್ನು ಪ್ರೀತಿಸಬೇಕು ಎಂದು ಹೇಳಿದ್ದಾರೆ.
ಬಹಳ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲಾಗಿದೆ, ಗೋವುಗಳನ್ನು ಅಪ್ಪಿಕೊಳ್ಳಬೇಕು. ಪುರುಷೋತ್ತಮ್ ರೂಪಾಲಾ ಅವರ ಸಚಿವಾಲಯದ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ನಾವೆಲ್ಲರೂ ಹಸುವನ್ನು ಪ್ರೀತಿಸಬೇಕು ಮತ್ತು ಅಪ್ಪಿಕೊಳ್ಳಬೇಕು ಎಂದು ಸಚಿವರು ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಹೇಳಿದರು.
ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಅವರು “33 ಕೋಟಿ ದೇವತೆಗಳು ಗೋವಿನೊಳಗೆ ವಾಸಿಸುತ್ತಾರೆ” ಎಂದು ನಿರ್ಧಾರವನ್ನು ಸ್ವಾಗತಿಸಿದ್ದಾರೆ.