ನವದೆಹಲಿ: ಬಂದೂಕುಧಾರಿಗಳು ಜೈಲಿನ ಮೇಲೆ ಗುಂಡಿನ ದಾಳಿ ಮಾಡಿ 14 ಜನರನ್ನು ಹತ್ಯೆಗೈದಿರುವ ಘಟನೆ ಮೆಕ್ಸಿಕೋದ ಜುವಾರೆಜ್ ನಲ್ಲಿ ಭಾನುವಾರ (ಜ.1 ರಂದು ) ನಡೆದಿರುವ ಬಗ್ಗೆ ವರದಿಯಾಗಿದೆ.
ಭಾನುವಾರ ಮುಂಜಾನೆ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ವಾಹನದಲ್ಲಿ ಬಂದ ವ್ಯಕ್ತಿಗಳು ಜೈಲಿನ ಮೇಲೆ ಗುಂಡು ಹಾರಿಸಿದ್ದಾರೆ. ಕೈದಿಗಳು,ಭದ್ರತಾ ಸಿಬ್ಬಂದಿಗಳು ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಓಡುವ ಭರದಲ್ಲಿ 14 ಮಂದಿ ಗುಂಡು ತಗುಲಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
10 ಮಂದಿ ಸಿಬ್ಬಂದಿಗಳು, ನಾಲ್ವರು ಕೈದಿಗಳು ಮೃತಪಟ್ಟಿದ್ದು, 24 ಮಂದಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ.
ಪೊಲೀಸರು ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೈದಿ ಹಾಗೂ ಸಿಬ್ಬಂದಿಗಳು ಘಟನೆಯಲ್ಲಿ ಮೃತಪಟ್ಟಿದ್ದಾರೆ.
ಮೆಕ್ಸಿಕನ್ ಜೈಲಿನಲ್ಲಿ ಕಳೆದ ಆಗಸ್ಟ್ ನಲ್ಲಿ ಈ ರೀತಿಯ ಘಟನೆ ನಡೆದಿತ್ತು. ಆ ಘಟನೆಯಲ್ಲಿ 11 ಜನ ಮೃತಪಟ್ಟಿದ್ದರು. ಈ ಸಂಬಂಧ ನಾಲ್ವರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.