NIA ಬಂಧಿತ ರಿಶಾನ್ ಶೇಕ್ ಎಂಬಾಂತನ ತಂದೆ ಜೊತೆಯಲ್ಲಿ ಇರುವ ಫೋಟೋವನ್ನ ಮುಂದಿಟ್ಟುಕೊಂಡು ಬಿಜೆಪಿ ಸ್ನೇಹಿತರು ಬಾಯಿಯಿಂದ ಬೇಧಿ ಮಾಡುತ್ತಿದ್ದಾರೆ. ನಮಗೂ ಆತನಿಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಸರ್ಕಾರದ ಅಧೀನದಲ್ಲಿರುವ NIA ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪೆಸಗಿದರೆ ಕಠಿಣ ಕ್ರಮ ಕೈಗೊಳ್ಳಲಿ ಎಂದು ಯುಟಿ ಖಾದರ್ ಹೇಳಿದ್ದಾರೆ.
ಆದರೆ ಕಂತೆ ಕಂತೆ ನೋಟುಗಳನ್ನ ಹರಡಿ ಸೆಲ್ಫಿ ಹೊಡೆದುಕೊಂಡು ಹಲ್ಲುಕಿರಿಯುವ
ವಿವಿಧ ದಂಧೆಯ ಕಿಂಗ್ ಪಿನ್ ಸ್ಯಾಂಟ್ರೋ ರವಿ ಬಿಜೆಪಿ ಸಚಿವರ ನಾಯಕರ ಹಾಗೂ ಕುಟುಂಬಸ್ಥರ ಜೊತೆ ಇರುವ ಫೋಟೋ ಬಗ್ಗೆ ಏಕೆ ಮಾತನಾಡ್ತಾ ಇಲ್ಲ ?
ಬಿಜೆಪಿ ಭಯೋತ್ಪಾದನೆ ಬುಡ ಸಮೇತ ಮಟ್ಟ ಹಾಕುವ ಬದಲು ಚುನಾವಣೆಗಾಗಿ ಫೋಟೋ ರಾಜಕೀಯ ಮಾಡುತ್ತಿರುವದನ್ನು ಜನ ಗಮನಿಸಿ ಸೂಕ್ತ ಉತ್ತರ ನೀಡಲಿದ್ದಾರೆ. ಸತ್ಯಮೇವ ಜಯತೆ ಎಂದು ಟ್ವೀಟ್ ಮಾಡಿದ್ದಾರೆ.