ಬಜರಂಗದಳ ಜಿಲ್ಲಾ ಸಂಚಾಲಕನ ಮೇಲೆ ಹಲ್ಲೆ: ಅಕ್ಟೋಬರ್ 22 ರಂದು ಬಂದ್’ಗೆ ಕರೆ

ತುಮಕೂರು: ಬಜರಂಗದಳ ಜಿಲ್ಲಾ ಸಂಚಾಲಕನ ಮೇಲೆ‌ ಹಲ್ಲೆ ಪ್ರಕರಣ ಹಿನ್ನೆಲೆಯಲ್ಲಿ ಅಕ್ಟೋಬರ್ 22 ರಂದು ತುಮಕೂರು ಬಂದ್​​ಗೆ ಕರೆ ನೀಡಲು ಹಿಂದೂಪರ ಸಂಘಟನೆಗಳು ನಿರ್ಧಾರ ಮಾಡಿವೆ.

ಇಂದು (ಅಕ್ಟೋಬರ್ 20) ನಡೆದ ಹಿಂದೂ ಸಂಘಟನೆಗಳ ಸಭೆಯಲ್ಲಿ ಬಂದ್​ಗೆ ಕರೆ ನೀಡಲು ನಿರ್ಧಾರ ಮಾಡಲಾಗಿದೆ. ನಿನ್ನೆ ಬಜರಂಗದಳ ಸಂಚಾಲಕ ಮಂಜು ಭಾರ್ಗವ್ ಎಂಬವರ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಈ ಹಲ್ಲೆ ಖಂಡಿಸಿ ಸ್ವಯಂ ಪ್ರೇರಿತ ತುಮಕೂರು ಬಂದ್​ಗೆ ಕರೆ ನೀಡಲಾಗಿದೆ. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ಗಂಟೆವರೆಗೂ ಬಂದ್ ಮಾಡುವಂತೆ ಕರೆ ನೀಡಲಾಗಿದ್ದು, ಟೌನ್ ಹಾಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Latest Indian news

Popular Stories

error: Content is protected !!