ಬಜೆಟ್ ಪ್ರತಿ ಹರಿದು ಡೆಪ್ಯೂಟಿ ಸ್ಪೀಕರ್ ಮೇಲೆ ಎಸೆದ ಬಿಜೆಪಿ ಶಾಸಕರ; ಅಗೌರವದ ವರ್ತನೆಯ ಖಂಡನೆ

ಬೆಂಗಳೂರು : ವಿಧಾನಸಭಾ ಅಧಿವೇಶನದಲ್ಲಿ ಬುಧವಾರ ಸದನದ ಬಾವಿಗಿಳಿದು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ ಬಿಜೆಪಿ ಶಾಸಕರು ಬಜೆಟ್ ಪ್ರತಿಗಳ ಕಾಗದಗಳನ್ನು ಹರಿದು ಚೂರು ಮಾಡಿ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ಮೇಲೆ ಎಸೆದ ಘಟನೆ ನಡೆದಿದೆ.

ಸದನದ ಬಾವಿಗಿಳಿದು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಧರಣಿ ನಡೆಸಿದರು. ಸ್ಪೀಕರ್ ಭೋಜನ ವಿರಾಮ ರದ್ದುಪಡಿಸಿ ಕಲಾಪ ಮುಂದುವರಿಸಿದರು. ಬಜೆಟ್ ಮೇಲಿನ ಚರ್ಚೆ ಮುಂದುವರಿಸಲಾಗಿದ್ದು, ಮಳವಳ್ಳಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಮಾತನಾಡುತ್ತಿದ್ದರು. ರಾಜಯಃ ಸರಕಾರದ ಐದು ಗ್ಯಾರಂಟಿ ಮತ್ತು ಇತರ ಯೋಜನೆಗಳನ್ನು ಹೊಗಳುತ್ತಿದ್ದರು. ಈ ವೇಳೆ ಬಿಜೆಪಿ ಶಾಸಕರು ಸದನದ ಬಾವಿಗಿಳಿದು
ಧರಣಿ ಮುಂದುವರಿಸಿದರು.

ಉಪಸಭಾಧ್ಯಕ್ಷರು ಸ್ಪೀಕರ್ ಪೀಠದಲ್ಲಿ ಕುಳಿತಿದ್ದರು. ಬಿಜೆಪಿ ಶಾಸಕರು ಬಜೆಟ್ ಪ್ರತಿಗಳನ್ನ ಹರಿದು ಚೂರು ಮಾಡಿ ಎಸೆದಿದ್ದಾರೆ. ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಆಕ್ರೋಶ ಹೊರ ಹಾಕಿದ್ದು, ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಮತದಾರರಿಗೆ ಈ ರೀತಿ ವರ್ತನೆ ತೋರಿ ಅವಮಾನ ಮಾಡಬೇಡಿ ಎಂದರು.ಸಭೆಯನ್ನು 3 ಗಂಟೆಗೆ ಮುಂದೂಡಿದರು.

ಕಾಂಗ್ರೆಸ್ ಶಾಸಕರು ಮತ್ತು ಸಚಿವರು ದಲಿತ ಸಮುದಾಯಕ್ಕೆ ಸೇರಿದ ಉಪಸಭಾಪತಿ ಅವರ ವಿರುದ್ಧ ಈ ರೀತಿ ವರ್ತನೆ ಸರಿಯಲ್ಲ ಎಂದು ಕಿಡಿ ಕಾರಿದರು.

Latest Indian news

Popular Stories