ಬಳ್ಳಾರಿಯ ಜೆಡಿಎಸ್ ಅಭ್ಯರ್ಥಿ ದಿಢೀರ್ ಬದಲು; ಪಕ್ಷಕ್ಕೆ ಸೇರ್ಪಡೆಗೊಂಡ ಅನಿಲ್ ಲಾಡ್’ಗೆ ಟಿಕೆಟ್!

ಬಳ್ಳಾರಿ: ಕಾಂಗ್ರೆಸ್’ನಲ್ಲಿ ಬಂಡಾಯದ ಬಾವುಟ ಹಾರಿಸಿದ್ದ ಬಳ್ಳಾರಿ ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಮಾಜಿ ಶಾಸಕ ಅನಿಲ್ ಲಾಡ್ ಅವರು, ಮಂಗಳವಾರ ತಡರಾತ್ರಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

ಕಳೆದ ರಾತ್ರಿ ಜೆಡಿಎಸ್ ನಾಯಕ ಹೆಚ್’ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಅನಿಲ್ ಲಾಡ್ ಅವರು, ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಅನಿಲ್ ಲಾಡ್ ಅವರು ಪಕ್ಷಕ್ಕೇ ಸೇರ್ಪಡೆಗೊಳ್ಳುತ್ತಿದ್ದಂತೆಯೇ ಕಳೆದ ವಾರ ಘೋಷಿಸಲಾಗಿದ್ದ ಬಳ್ಳಾರಿ ಜೆಡಿಎಸ್ ಅಭ್ಯರ್ಥಿಯನ್ನು ಪಕ್ಷವು ಏಕಾಏಕಿ ಬದಲಾಯಿಸಿದೆ.

ಜೆಡಿಎಸ್ ಗೆ ಸೇರ್ಪಡೆಯಾದ  ಅನಿಲ್ ಲಾಡ್ ಅವರಿಗೆ ಟಿಕೆಟ್ ನೀಡಿದೆ. ಅನಿಲ್ ಲಾಡ್ ಅವರೇ ಬಳ್ಳಾರಿಯ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿದೆ.

ಕಳೆದ ವಾರ ಪ್ರಕಟವಾಗಿದ್ದ ಜೆಡಿಎಸ್ ಪಟ್ಟಿಯಲ್ಲಿ ಮುನ್ನಾಭಾಯಿ ಎನ್ನುವವರಿಗೆ ಜೆಡಿಎಸ್ ಟಿಕೆಟ್ ನೀಡಲಾಗಿತ್ತು.

Latest Indian news

Popular Stories