ಬಹುಭಾಷಾ ನಟ ಕಮಲ್​ ಹಾಸನ್ ಅಸ್ವಸ್ಥ​​ : ಚೆನ್ನೈ ಆಸ್ಪತ್ರೆಗೆ ದಾಖಲು

ಬಹುಭಾಷಾ ನಟ ಕಮಲ್​ ಹಾಸನ್​​ ಅಸ್ವಸ್ಥರಾಗಿದ್ದಪ  ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ಧಾರೆ.

ಕಮಲಹಾಸನ್​​ ಕಳೆದ ರಾತ್ರಿ ಎಸ್ ಆರ್ ಎಂ ಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಜ್ಞ ವೈದ್ಯರಿಂದ ಕಮಲ ಹಾಸನ್​​ಗೆ ಟ್ರೀಟ್​ಮೆಂಟ್​ ಪಡೆದುಕೊಳ್ಳುತ್ತಿದ್ಧಾರೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ದಿಡೀರ್​ ಆಸ್ಪತ್ರೆಗೆ ದಾಖಲಾಗಿದ್ಧಾರೆ.

ಇಂದು ಮಧ್ಯಾಹ್ನದ ವೇಳೆಗೆ ಡಿಸ್ಚಾರ್ಜ್​ ಆಗುವ ಸಾಧ್ಯತೆಯಿದೆ. ನಾರ್ಮಲ್​​​ ಚೆಕಪ್​​ಗಾಗಿ ದಾಖಲಾಗಿದ್ದಾರೆ ಎಂದು ಕುಟುಂಬದ ಮಾಹಿತಿ ನೀಡಿದೆ. ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯಲು
ವೈದ್ಯರ ಸೂಚನೆ ನೀಡಿದ್ಧಾರೆ. ಕಮಲ್​​ ಹೈದ್ರಾಬಾದ್​ನಿಂದ ವಾಪಸ್​ ಆದ ಕೂಡಲೇ ಅಸ್ವಸ್ಥರಾಗಿದ್ದರು.

ನಟ ಕಮಲ್ ಹಾಸನ್ ಅವರಿಗೆ ಈಗ 68 ವರ್ಷ ವಯಸ್ಸು. ಈಗಲೂ ಅವರು ಸಿನಿಮಾ ರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ನಿರ್ಮಾಣ ಹಾಗೂ ನಟನೆಯಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ‘ತಮಿಳು ಬಿಗ್ ಬಾಸ್​ ಸೀಸನ್ 6’ನ್ನು ನಡೆಸಿಕೊಡುತ್ತಿದ್ದಾರೆ.

Latest Indian news

Popular Stories

error: Content is protected !!