ಬಾಂಗ್ಲಾದೇಶ ಹಿಂದೂ ಯೂನಿಟಿ ಕೌನ್ಸಿಲ್ ಟ್ವಿಟರ್ ಖಾತೆ ನಕಲಿ – ಸುಳ್ಳು ವೀಡಿಯೋಗಳ ಪ್ರಸಾರ!

ಹೈದರಾಬಾದ್: ಭಾರತದಲ್ಲಿ ಸುದ್ದಿ ಮಾಧ್ಯಮಗಳು ವರದಿಗಳಲ್ಲಿ ಉಲ್ಲೇಖಿಸಿರುವ ಟ್ವಿಟರ್ ಹ್ಯಾಂಡಲ್, ಬಾಂಗ್ಲಾದೇಶ ಹಿಂದೂ ಯೂನಿಟಿ ಕೌನ್ಸಿಲ್ – (@UnityCouncilBD), ಇದು ಬಾಂಗ್ಲಾದೇಶದಾದ್ಯಂತ ದುರ್ಗಾ ಪೂಜಾ ಪಂಡಲ್‌ಗಳ ಮೇಲೆ ವಿಧ್ವಂಸಕ ದಾಳಿಯ ವಿವಿಧ ಘಟನೆಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡಿದೆ ಎಂದು ವರದಿಯಾಗಿತ್ತು. ಅಲ್ಪಸಂಖ್ಯಾತ ಹಕ್ಕುಗಳ ಸಂಘಟನೆ ಈ ಟ್ವೀಟರ್ ಖಾತೆ ತನ್ನದಲ್ಲ ಅದು ನಕಲಿ ಎಂದು ಹೇಳಿದೆ.

ಜನವರಿ 2021 ರಲ್ಲಿ ರಚಿಸಲಾದ ಖಾತೆಯು ಕೇವಲ 386 ಬಾರಿ ಟ್ವೀಟ್ ಮಾಡಿದೆ. ನಕಲಿ ಖಾತೆಯನ್ನು ಟ್ವಿಟರ್ ಪರಿಶೀಲಿಸಿದೆ. ಇದು 27,000 ಕ್ಕೂ ಹೆಚ್ಚು ಫಾಲವರ್ಸ್ ಹೊಂದಿದೆ ಎಂದು ದಿ ವೈರ್ ವರದಿ ಹೇಳಿದೆ.

ಮತ್ತೊಂದೆಡೆ, ‘ಬಾಂಗ್ಲಾದೇಶ ಹಿಂದೂ ಯೂನಿಟಿ ಕೌನ್ಸಿಲ್’ ಸಂಸ್ಥೆ ಟ್ವಿಟರ್ ಪುಟವನ್ನು ಹೊರತುಪಡಿಸಿ ಬೇರೆ ಯಾವುದೇ ಡಿಜಿಟಲ್ ವೇದಿಕೆ ಹೊಂದಿಲ್ಲ.ವೆಬ್‌ಸೈಟ್ ಅಥವಾ ಫೇಸ್‌ಬುಕ್ ಪುಟವನ್ನು ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ವಿಟರ್ ಹ್ಯಾಂಡಲ್ ತನ್ನ ಪ್ರೊಫೈಲ್ ಬಯೋದಲ್ಲಿ ಲಿಂಕ್ ಹೊಂದಿದೆ. ಆದರೆ ಇದು ‘ಬಾಂಗ್ಲಾದೇಶ ಹಿಂದೂ ಯೂನಿಟಿ ಕೌನ್ಸಿಲ್’ ವೆಬ್‌ಸೈಟ್‌ಅಲ್ಲ.ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ (BHBCUC), ಒಂದು ಪ್ರಮುಖ ಅಲ್ಪಸಂಖ್ಯಾತ ನಾಗರಿಕ ಸಮಾಜ ಸಂಸ್ಥೆಯಾಗಿದೆ.

ಇದೀಗ BHBCUC ಶೇರ್ ಮಾಡಿದ ವೀಡಿಯೋ, ಚಿತ್ರವನ್ನು ದೇಶದ ಪ್ರಮುಖ ಸುದ್ದಿ ವಾಹಿನಿಗಳು ಬಳಸಿಕೊಂಡು ಸುದ್ದಿ ಮಾಡಿದೆ. ಇದೀಗ ಸ್ವತಃ ಸಂಘಟನೆಯೇ ಆ ಟ್ವೀಟರ್ ಖಾತೆ ನಕಲಿ ಎಂದು ಸ್ಪಷ್ಟಪಡಿಸಿದ್ದಾರೆ.

49070033 7b02 4bc8 b96d d9bd9dacfcb5 Featured Story, international

ಇನ್ನು ತ್ರಿಪುರದಲ್ಲಿ ಪೆಂಡಾಲ್’ಗೆ ಬಿದ್ದ ಆಕಸ್ಮಿಕ ಬೆಂಕಿಯನ್ನು ಕೂಡ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಘಟನೆಯೆಂಬಂತೆ ಇದರಲ್ಲಿ ಹಂಚಿ ಕೊಳ್ಳಲಾಗಿದೆ. ಇದರ ಕುರಿತು ಫ್ಯಾಕ್ಟ್ ಚೆಕ್ ಮಾಡಿದ ಅಲ್ಟ್ ನ್ಯೂಸ್ ಅದು ಬಾಂಗ್ಲಾದೇಶದ್ದಲ್ಲ ಬದಲಾಗಿ ತ್ರಿಪುರಾದಲ್ಲಿ ನಡೆದ ಘಟನೆ. ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿರುವ ಕುರಿತು ಸಾಕ್ಷ್ಯ ಸಮೇತ ವರದಿ ಮಾಡಿದೆ.

Latest Indian news

Popular Stories

error: Content is protected !!