ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಜೈನ್ ವಿ.ವಿ.ವಿಧ್ಯಾರ್ಥಿಗಳನ್ನು ಕೂಡಲೇ ಬಂಧಿಸಿ : ಶ್ಯಾಮರಾಜ್ ಬಿರ್ತಿ

ಬೆಂಗಳೂರಿನ ಜೈನ್ ವಿಶ್ವವಿಧ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರನ್ನು ಅವಮಾನಿಸಿದ ಬೆಂಗಳೂರಿನ ಜೈನ್ ವಿಶ್ವವಿಧ್ಯಾನಿಲಯದ ವಿಧ್ಯಾರ್ಥಿ ವಿರುಧ್ಧ ದಲಿತ ಧೌರ್ಜನ್ಯ ತಡೆ ಕಾಯ್ದೆ ಅನ್ವಯ ಕೇಸು ದಾಖಲಿಸಿ ಕೂಡಲೇ ಬಂಧಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಶ್ಯಾಮರಾಜ್ ಬಿರ್ತಿ ಆಗ್ರಹಿಸಿದ್ದಾರೆ.

ಇಂದು ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ ಶ್ಯಾಮರಾಜ್ ಬಿರ್ತಿಯವರು , ವಿಧ್ಯಾರ್ಥಿಗಳನ್ನು ಬಂಧಿಸದೇ ಇದ್ದರೆ , ಬೆಂಗಳೂರಿನ ಜೈನ್ ವಿಶ್ವವಿಧ್ಯಾನಿಲಯದ ಎದುರು ರಾಜ್ಯ ಮಟ್ಟದ ಹೋರಾಟ ಕೈಗೊಳ್ಳುವ ಬಗ್ಗೆ ರಾಜ್ಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.


ಇಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮಾವರ ಪೋಲಿಸ್ ಠಾಣೆಗೆ ಭೇಟಿನೀಡಿ ಶ್ಯಾಮರಾಜ್ ಬಿರ್ತಿ ನೇತ್ರತ್ವದ ನಿಯೋಗದಲ್ಲಿ ದಲಿತ ಮುಖಂಡ ಎಸ್. ನಾರಾಯಣ ಬಿರ್ತಿ , ಸುಧಾಕರ ಗುಜ್ಜರ್ ಬೆಟ್ಟು , ಬಿರ್ತಿ ಸುರೇಶ , ಶಿವಾನಂದ ಬಿರ್ತಿ , ಅರುಣ ಪಾಡಿಗಾರ , ಹರೀಶ್ಚಂದ್ರ ಕೆ ಡಿ ಬಿರ್ತಿ , ಪುರಂದರ ಕುಂದರ್ ಬಿರ್ತಿ , ಇದ್ದು ಕೂಡಲೇ ಕೇಸು ದಾಖಲಿಸಬೇಕೆಂದು ದೂರು ನೀಡಲಾಯಿತು.

Latest Indian news

Popular Stories