ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ನಮ್ಮನ್ನು ಮನೆಯಿಂದ ಹೊರ ಹಾಕಿದ್ದಾರೆ – ವಿಚ್ಛೇದಿತ ಪತ್ನಿ ಆಲಿಯಾ

ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಅವರ ವಿಚ್ಛೇದಿತ ಪತ್ನಿ ಆಲಿಯಾ (ಜೈನಾಬ್) ಶುಕ್ರವಾರ ನಟ ತನ್ನನ್ನು ಮತ್ತು ತನ್ನಿಬ್ಬರ ಮಕ್ಕಳನ್ನು ಮನೆಯಿಂದ ಹೊರಗೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾರೆ. 


ಆದರೆ, ನಟನ ವಕ್ತಾರರು ಈ ಆರೋಪವನ್ನು ತಳ್ಳಿಹಾಕಿದ್ದು ಆಸ್ತಿಯು ಸಿದ್ದಿಕಿ ಅವರ ತಾಯಿಯ ಹೆಸರಿನಲ್ಲಿರುವುದರಿಂದ, ಅಲ್ಲಿ ಯಾರು ಇರಬೇಕು. ಯಾರೂ ಇರಬಾರದು ಎಂಬುದನ್ನು ಆಲಿಯಾ ನಿರ್ಧರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇನ್‌ಸ್ಟಾಗ್ರಾಮ್‌ನಲ್ಲಿನ ಪೋಸ್ಟ್‌ನಲ್ಲಿ ಆಲಿಯಾ ಮನೆಯನ್ನು ಪ್ರವೇಶಿಸದಂತೆ ತಡೆಯಲು ನಟ ಅಲ್ಲಿ ಕಾವಲುಗಾರರನ್ನು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

’40 ದಿನಗಳ ಕಾಲ ಮನೆಯಲ್ಲಿದ್ದ ನಂತರ, ವರ್ಸೋವಾ ಪೊಲೀಸ್ ಠಾಣೆಯ ಅಧಿಕಾರಿಗಳು ತಕ್ಷಣ ನನಗೆ ಕರೆ ಮಾಡಿದ ಕಾರಣ ನಾನು ಹೊರಗೆ ಬಂದೆ. ಆದರೆ ನಾನು ಮಕ್ಕಳೊಂದಿಗೆ ಮನೆಗೆ ಮರಳಿದಾಗ, ನವಾಜುದ್ದೀನ್ ಸಿದ್ದಿಕಿ ಮನೆಯೊಳಗೆ ಪ್ರವೇಶಿಸಿದರು. ಆದರೆ ನಮ್ಮನ್ನು ಪ್ರವೇಶಿಸದಂತೆ ಕಾವಲುಗಾರನು ತಡೆದು ನಿಲ್ಲಿಸಿದನು ಎಂದು ಹೇಳಿದ್ದಾರೆ.

ವೀಡಿಯೊ ಕ್ಲಿಪ್‌ನಲ್ಲಿ, ನಟನ 12 ವರ್ಷದ ಮಗಳು ಅಳುತ್ತಿರುವುದನ್ನು ಮತ್ತು ಅವರ 7 ವರ್ಷದ ಮಗ ತನ್ನ ತಾಯಿಯ ಪಕ್ಕದಲ್ಲಿ ನಿಂತಿರುವುದನ್ನು ಕಾಣಬಹುದು. ಸದ್ಯ ಈ ಸಂಬಂಧ ಪೊಲೀಸರು ಯಾವುದೇ ಎಫ್‌ಐಆರ್‌ ದಾಖಲಿಸಿಲ್ಲ. ಅದೇ ಸಮಯದಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಲಭ್ಯವಿರುವ ಕೆಲವು ವೀಡಿಯೊಗಳಲ್ಲಿ, ನವಾಜುದ್ದೀನ್ ತನ್ನ ತಾಯಿಯನ್ನು ಭೇಟಿ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು, ಆದರೆ ಅವನ ಸಹೋದರ ಫೈಜುದ್ದೀನ್ ಅವನನ್ನು ತಡೆಯುತ್ತಾನೆ.

ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕೆಂದು ಅರ್ಥವಾಗುತ್ತಿಲ್ಲ. ನವಾಜುದ್ದೀನ್ ಪತ್ನಿ ಆಲಿಯಾ ನನ್ನ ಬಳಿ 81 ರೂಪಾಯಿ ಇದೆ ಎಂದು ವಿಡಿಯೋದಲ್ಲಿ ಹೇಳುತ್ತಿದ್ದಾರೆ. ಹೋಟೆಲ್‌ಗೂ ಹೋಗುವಂತಿಲ್ಲ, ಮನೆಯೂ ಇಲ್ಲ. ಈಗ ಮಕ್ಕಳೊಂದಿಗೆ ಎಲ್ಲಿಗೆ ಹೋಗಬೇಕೆಂದು ನನಗೆ ಅರ್ಥವಾಗುತ್ತಿಲ್ಲ. ನವಾಜ್ ನನ್ನ ಮಕ್ಕಳಿಗೆ ಮಾಡುತ್ತಿರುವುದನ್ನು ನಾನು ಎಂದಿಗೂ ಕ್ಷಮಿಸಲಾರೆ ಎಂದಿದ್ದಾಳೆ. ರಾತ್ರಿ 12 ಗಂಟೆ ಸುಮಾರಿಗೆ ನವಾಜ್ ನನ್ನನ್ನು ಮತ್ತು ನನ್ನ ಮಕ್ಕಳನ್ನು ರಸ್ತೆಯಲ್ಲಿ ನಿಲ್ಲುವಂತೆ ಮಾಡಿದ್ದಾನೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನನ್ನ ಮಕ್ಕಳನ್ನು ಎಲ್ಲಿಗೆ ಕರೆದೊಯ್ಯಬೇಕೆಂದು ನನಗೆ ತಿಳಿದಿಲ್ಲ.
 
ನವಾಜುದ್ದೀನ್ ಸಿದ್ದಿಕಿ ಅವರ ವಕ್ತಾರರು ಹೇಳಿಕೆಯಲ್ಲಿ, ನಟನ ತಾಯಿ ಮೆಹರುನಿಶಾ ಸಿದ್ದಿಕಿ ಅವರ ಆರೈಕೆದಾರರು ತಮ್ಮ ಮೊಮ್ಮಕ್ಕಳು ಮಾತ್ರ ಮನೆಗೆ ಪ್ರವೇಶಿಸಬಹುದು, ಬೇರೆ ಯಾರಿಗೂ ಅವಕಾಶವಿಲ್ಲ ಎಂದು ಹೇಳುತ್ತಾರೆ.

Latest Indian news

Popular Stories