ಬಾಲ್ಯ ವಿವಾಹ ವಿರುದ್ಧ ಕಾರ್ಯಾಚರಣೆ: ಅಸ್ಸಾಂ ಸರ್ಕಾರದಿಂದ ತಾತ್ಕಾಲಿಕ ಜೈಲುಗಳ ಸ್ಥಾಪನೆ

ಗುವಾಹತಿ: ಪ್ರತಿಪಕ್ಷಗಳ ಟೀಕೆ ಮತ್ತು ಪ್ರತಿಭಟನೆಗಳ ನಡುವೆಯೇ ಬಾಲ್ಯ ವಿವಾಹದ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ಅಸ್ಸಾಂ ಸರ್ಕಾರ ನಿತ್ಯ ನೂರಾರು ಜನರನ್ನು ಬಂಧಿಸುತ್ತಿದೆ.

ಬಂಧಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪೊಲೀಸರು ಈಗ ಆರೋಪಿಗಳನ್ನು ಇರಿಸಲು ತಾತ್ಕಾಲಿಕ ಜೈಲುಗಳನ್ನು ಸ್ಥಾಪಿಸುತ್ತಿದ್ದಾರೆ. ಗೋಲ್ಪಾರಾ ಮತ್ತು ಕ್ಯಾಚಾರ್ ಜಿಲ್ಲೆಗಳಲ್ಲಿ ಈಗಾಗಲೇ ಅಂತಹ ಎರಡು ಜೈಲುಗಳನ್ನು ಸ್ಥಾಪಿಸಿದೆ.

ವಿವಿಧ ಜಿಲ್ಲೆಗಳ ಆರೋಪಿಗಳನ್ನು ಈಗಾಗಲೇ ಗೋಲ್‌ಪಾರಾದಲ್ಲಿರುವ ಜೈಲಿಗೆ ಸ್ಥಳಾಂತರಿಸಿದ್ದರೆ, ಕ್ಯಾಚಾರ್‌ನಲ್ಲಿ ಮತ್ತೊಂದು ತಾತ್ಕಾಲಿಕ ಜೈಲು ಸಿದ್ಧವಾಗುತ್ತಿದೆ.

ತಾತ್ಕಾಲಿಕ ಜೈಲು ಸ್ಥಾಪಿಸಲು ನಾವು ಅನುಮೋದನೆ ಪಡೆದಿದ್ದೇವೆ. ಸಿಲ್ಚಾರ್ ಬಳಿ ಕಾರ್ಯನಿರ್ವಹಿಸದ ಅಸ್ತಿತ್ವದಲ್ಲಿರುವ ಸರ್ಕಾರಿ ಆವರಣದಲ್ಲಿ ಇದನ್ನು ಸ್ಥಾಪಿಸಲಾಗುವುದು” ಎಂದು ಕ್ಯಾಚಾರ್ ಪೊಲೀಸ್ ವರಿಷ್ಠಾಧಿಕಾರಿ ನೋಮಲ್ ಮಹತ್ತಾ ಪಿಟಿಐಗೆ ತಿಳಿಸಿದ್ದಾರೆ.

ಕಟ್ಟಡ ಮತ್ತು ಇತರ ಮೂಲಸೌಕರ್ಯಗಳು ಈಗಾಗಲೇ ಲಭ್ಯವಿದ್ದು, ಈಗ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Latest Indian news

Popular Stories