ಮೊದಲ ಬಾರಿಗೆ ಸೌದಿ ಅರೇಬಿಯಾವು ಮಹಿಳೆಯೊಬ್ಬರನ್ನು ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲು ಸಜ್ಜಾಗಿದೆ.
ಪ್ರಸಕ್ತ ವರ್ಷಾಂತ್ಯದಲ್ಲೇ ಸೌದಿಯ ಬಾಹ್ಯಾಕಾಶ ಯೋಜನೆಯೊಂದರ ಮೂಲಕ ಮೊದಲ ಮಹಿಳಾ ಗಗನಯಾತ್ರಿ ನಭಕ್ಕೆ ಜಿಗಿಯಲಿದ್ದಾರೆ.
2023ರ ದ್ವಿತೀಯಾರ್ಧದಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶಕ್ಕೆ ತೆರಳುತ್ತಿರುವ ಪುರುಷ ಗಗನಯಾತ್ರಿ ಅಲಿ-ಅಲ್ ಖರ್ನಿ ಅವರಿಗೆ ಮಹಿಳಾ ಗಗನಯಾತ್ರಿ ರೆಯ್ನಾನಾ ಬರ್ನಾವಿ ಅವರೂ ಸಾಥ್ ನೀಡಲಿದ್ದಾರೆ ಎಂದು ಸೌದಿಯ ಅಧಿಕೃತ ಪ್ರಸ್ ಏಜೆನ್ಸಿ ತಿಳಿಸಿದೆ.