ಬಿಎಂಟಿಸಿ ಪರಿಚಯಿಸಲಿದೆ ನಿಮ್ಮ ಬಸ್ ಆ್ಯಪ್

ಬೆಂಗಳೂರು: ಬಹು ನಿರೀಕ್ಷಿತ ಬಿಎಂಟಿಸಿಯ ಕನಸಿನ ಯೋಜನೆ ನಿಮ್ಮ ಬಸ್ ಆ್ಯಪ್ ಕಾರ್ಯರೂಪಕ್ಕೆ ಬರುವ ದಿನ ಹತ್ತಿರವಾಗಿದೆ. ಈ ತಿಂಗಳ ಅಂತ್ಯದಲ್ಲಿ ಇದು ಬಳಕೆದಾರರಿಗೆ ದೊರೆಯುವ ನಿರೀಕ್ಷೆಯಿದೆ.

ರಿಯಲ್ ಟೈಮ್ ನಲ್ಲಿ ಬಸ್ ಗಳನ್ನು ಟ್ರ್ಯಾಕ್ ಮಾಡುವುದು ಸೇರಿದಂತೆ ಹಲವು ಫೀಚರ್ ಗಳನ್ನು ಈ ಆ್ಯಪ್ ಹೊಂದಿದೆ. ಈ ಹಿಂದೆ ಡಿಸೆಂಬರ್ 13ರಂದು ಇದರ ಜಾರಿಗೆ ತೀರ್ಮಾನಿಸಲಾಗಿತ್ತು.

ಕೆಲವು ತಾಂತ್ರಿಕ ದೋಷಗಳು ಕಂಡು ಬಂದ ಕಾರಣ ಅದನ್ನು ಪರಿಷ್ಕರಿಸಿ ಇದೀಗ ಪೂರ್ಣ ಮಟ್ಟದಲ್ಲಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.

ಇದೇ ವೇಳೆ ಆ್ಯಪ್ ಬಳಕೆ ಮತ್ತು ಅಭಿವೃದ್ದಿಗೆ ನೀಡುವಷ್ಚೇ ಆದ್ಯತೆಯನ್ನು ಸುರಕ್ಷಿತ ಪ್ರಯಾಣಕ್ಕೆ ನೀಡಿ ಎಂಬ ಬೇಡಿಕೆ ಕೂಡ ಬಲಗೊಂಡಿದೆ

Latest Indian news

Popular Stories