ಬಿಎಸ್‌ವೈ ಬಗ್ಗೆ ನನಗೆ ಕೇಳಬೇಡಿ, ಅವರ ಕುರಿತು ಅಪಾರ ಗೌರವವಿದೆ: ಯತ್ನಾಳ ಯೂ ಟರ್ನ್

ವಿಜಯಪುರ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಬಗ್ಗೆ ಮಾಧ್ಯಮದವರು ಇನ್ಮುಂದೆ ನನಗೆ ಪ್ರಶ್ನೆ ಕೇಳಬೇಡಿ.‌ ಬಿಎಸ್ವೈ ಬಗ್ಗೆ ಅಪಾರ ಗೌರವ ಹೊಂದಿದ್ದೇನೆ ಎಂದು ವಿಜಯಪುರ ನಗರದಲ್ಲಿ ಗುರುವಾರ ಮಾಧ್ಯಮದವರ ಎದುರು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಬಿಎಸ್ವೈ ಅವರು ಪಾಪ ಹಿರಿಯರಿದ್ದಾರೆ. ಅವರ ಬಗ್ಗೆ ಮಾತಾಡಬೇಡಿ ಎಂದು ಹೈಕಮಾಂಡ್ ಹೇಳಿದೆ. ನಾನು ಮಾತಾಡಲ್ಲ ಎಂದು ಹೇಳಿದ್ದೇನೆ. ಹೈಕಮಾಂಡ್ ಹೇಳಿದ ಮೇಲೆ ಸಾಫ್ಟ್ ಆಗಲೇಬೇಕಲ್ಲ. ಎಲ್ಲಾದಕ್ಕೂ ಗುರ್ ಅನ್ನೋಕೆ ಬರುತ್ತಾ..? ನಮ್ಮ ಆಸ್ತಿ ಅವರು ಕಸೆದುಕೊಂಡಿಲ್ಲ. ಅವರ ಆಸ್ತಿ ನಾನು ಕಸೆದುಕೊಂಡಿಲ್ಲ. ಏನೋ ರಾಜಕೀಯ ಸಂಘರ್ಷ ಇರ್ತಾವೆ. ಈಗ ಅದೆಲ್ಲಕ್ಕೂ ವಿರಾಮ ಎಂದರು.

ರಾಜಕಾರಣಿ, ಅಧಿಕಾರಿಗಳನ್ನ ಬ್ಲಾಕ್‌ಮೇಲ್ ಮಾಡುವ ಗುಂಪು ಬೆಂಗಳೂರಿನಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೊಸ ಬಾಂಬ್ ಸಿಡಿಸಿದರು.

ಬೆಂಗಳೂರಿನಲ್ಲಿ ಒಂದು ಗುಂಪು ಕೆಲಸ ಮಾಡ್ತಿದೆ.‌ ಬ್ಲಾಕ್ ಮೇಲ್ ಅವರ ದಂಧೆ, ಯಾವುದೇ ಪಕ್ಷದವರಿದ್ದರು ಬಣ್ಣ ಬಯಲಾಗುತ್ತದೆ. ಅದಕ್ಕಾಗಿ ಸಿಡಿ‌ ಕೇಸ್ ಸಿಬಿಐಗೆ ಕೊಡಿ, ಬಣ್ಣ ಬಯಲಾಗುತ್ತೆ. ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಹೇಳಿದಂತೆ ಸಿಬಿಐ ತನಿಖೆ ನಡೆಯಲಿ‌. ಇದ್ರಲ್ಲಿ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುತ್ತದೆ ಎಂದರು.

Latest Indian news

Popular Stories