ಬಿಜೆಪಿಯ ಟ್ರೋಲ್ ಆರ್ಮಿ ಕಚೇರಿಯ ಮೇಲೆ ಪೊಲೀಸರ ದಾಳಿಯ ವೀಡಿಯೋ ವೈರಲ್

ಬಿಜೆಪಿ ಜನರ ಗುಂಪು ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿರುವ ವೀಡಿಯೋ ವೈರಲಾಗಿದೆ

ಈ ವ್ಯಕ್ತಿಗಳು ಕಳೆದ ಎರಡು ತಿಂಗಳಿನಿಂದ ನಕಲಿ ಪತ್ರಿಕಾ ಕೇಂದ್ರಗಳನ್ನು ನಡೆಸುತ್ತಿದ್ದು, ಜನರ ಐಡಿ ಹ್ಯಾಕ್ ಮಾಡಿ, ಕಾಂಗ್ರೆಸ್ ಪಕ್ಷದ ಬಗ್ಗೆ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮತ್ತು 60 ರಿಂದ 70 ಯುವಕ-ಯುವತಿಯರನ್ನು ನೇಮಿಸಿಕೊಳ್ಳಲಾಗಿದ್ದು ತಿಂಗಳಿಗೆ 15 ಸಾವಿರ ವೇತನವನ್ನು ನೀಡಲಾಗಿದೆ.ಜೊತೆಗೆ ಲ್ಯಾಪ್‌ಟಾಪ್‌ಗಳು, ಸ್ಕ್ರಿಪ್ಟ್‌ಗಳು ಮತ್ತು ಹೆಚ್ಚಿನ ಸಾಫ್ಟ್‌ವೇರ್ ಸಾಮಗ್ರಿಗಳನ್ನು ಕೆಲಸ ಮಾಡಲು ಒದಗಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರಾಧ ಅವೀನಾಶ್ ಎಂಬ ಟ್ವೀಟ್ ಐಡಿಯಲ್ಲಿ ವೀಡಿಯೋ ವೈರಲಾಗಿದೆ.

Latest Indian news

Popular Stories