ವರದಿ: ಸಮಿಯುಲ್ಲಾ ಉಸ್ತಾದ
ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ವಾಗ್ದಾಳಿ ಮುಂದುವರೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಆಗಿದೆ, ಸರ್ಕಾರ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ, ಬಿಜೆಪಿ ಪಕ್ಷ ಅಲ್ಲ ಇದು, ಬಿಜಿನೆಸ್ ಜನತಾ ಪಾರ್ಟಿ ಆಗಿದೆ ಎಂದು ಲೇವಡಿ ಮಾಡಿದರು.
ರಸ್ತೆ, ಚರಂಡಿ ಸೇರಿದಂತೆ ವಿವಿಧ ಕೆಲಸದಲ್ಲಿ ಹಣ ಹೊಡೆ ಯುತ್ತಿದ್ದಾರೆ, ಬಿಜೆಪಿ ಪಕ್ಷ ದೇಶವನ್ನು ಆಳೋಕೆ ಬಂದಿಲ್ಲ ಎಂದರು. ಜಿಹಾದ್ ಹೆಸರಿನಲ್ಲಿ ಕಟೀಲ್ ರಾಜಕೀಯ ಮಾಡುತ್ತಿದ್ದಾರೆ ಕಟೀಲ್‌ಗೆ ಯೋಗ್ಯತೆ ಇದೀಯಾ..? ನಿಜವಾದ ದೇವರು ಅಂಬೇಡ್ಕರ್ ಅವರು ಸಂವಿಧಾನಕ್ಕೆ ನಾನು ಮೊದಲು ಗೌರವ ಕೊಡುತ್ತೇನೆ, ಪಾರ್ಲಿಮೆಂಟ್ ನಲ್ಲಿ ಹೆಜ್ಜೆ ಇಡೋಕ್ಕೆ ಕಟೀಲ್‌ಗೆ ಯೋಗ್ಯತೆ ಇಲ್ಲ, ಅವರಿಗೆ ನಾಚಿಕೆ ಆಗಬೇಕು, ಹಿಂದುತ್ವದಲ್ಲಿ ಮಾತ್ರ ಕಟೀಲ್ ಹೋಗುತ್ತಾರೆ ಮುಸ್ಲಿಂರನ್ನು ದೂರು ಇಡುವ ಕೆಲಸ ಆಗುತ್ತಿದೆ, ಈ ಸಲ ಬದಲಾವಣೆ ಕಾಂಗ್ರೆಸ್ ಪರ ಬರುತ್ತದೆ, ಬಿಜೆಪಿ ಹಿಂದುತ್ವ ಅಜೆಂಡಾ ನೆಲ ಕಚ್ಚಿದೆ ಎಂದರು.
ನಾನು ಸಿನೆಮಾ ತೆಗೆಯುತ್ತಿಲ್ಲ: ಬರುವ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಕುಮಾರ ಬಂಗಾರಪ್ಪ ಎದುರು ಮಧು ಬಂಗಾರಪ್ಪ ಸ್ಪರ್ಧೆ ವಿಚಾರವಾಗಿ, ಇದು ಮತ್ತೊಮ್ಮೆ ಸಹೋದರರ ಸವಾಲು ಎನ್ನಬಹುದೇ ಎನ್ನುವ ಪ್ರಶ್ನೆಗೆ ಗರಂ ಆದ ಮಧು ಬಂಗಾರಪ್ಪ, ಸಹೋದರರ ಸವಾಲು ಎನ್ನಲು ನಾನು ಸಿನೆಮಾ ತೆಗೆಯುತ್ತಿಲ್ಲ, ನಮ್ಮ ಸಂಸಾರಿಕ ವಿಚಾರ ತಂದೆ ಬಂಗಾರಪ್ಪ ನಮ್ಮ ಮನೆ ಪಂಚಾಯಿತಿ ಈಗಾಗಲೇ ಮಾಡಿ ಬಿಟ್ಟಿದ್ದಾರೆ. ಪದೇ ಪದೇ ಅದೇ ಹೇಳುವದು ಸರಿಯಲ್ಲ, ನಾನು ಕಾಂಗ್ರೆಸ್ ಪಕ್ಷದಿಂದ ಅರ್ಜಿ ಹಾಕಿದ್ದೇನೆ, ಟಿಕೇಟ್ ಸಿಗುವ ವಿಶ್ವಾಸವಿದೆ, ಅದೇ ರೀತಿ ಅವರು ಅವರ ಪಕ್ಷದ ಪರ ಇರುತ್ತಾರೆ, ಅವರವರ ವಿಷಯ ಬಿಟ್ಟು ಬಿಡಿ ಎಂದರು.
ಬಿಜೆಪಿದ್ದು ದ್ವೇಷ ರಾಜಕಾರಣ: ಹಿಂದು ಕಾರ್ಯಕರ್ತ ಪರೇಶ ಮೇಸ್ತ್ರಾ ಹತ್ಯೆಯನ್ನು ಬಿಜೆಪಿ 2018ರ ಚುನಾವಣೆಯಲ್ಲಿ ಅಸ್ತ್ರವನ್ನಾಗಿ ಬಳಸಿಕೊಂಡಿತ್ತು. ಇದರ ಪರಿಣಾಮ ಮಂಗಳೂರು, ಶಿವಮೊಗ್ಗ, ಉಡುಪಿ, ಕಾರವಾರದಲ್ಲಿ ಕೋಮು ಗಲಭೆಗಳಾದವು, ಹಿಂದು- ಮುಸ್ಲಿಂ ನಡುವೆ ಧ್ವೇಷ ಹುಟ್ಟುವಂತಾಯಿತು ಅದನ್ನು ಯಾರು ಮಾಡಿದರು? ಈಗ ಮತ್ತೆ ಕಾರಣ ಹುಡುಕುತ್ತಿದ್ದಾರೆ, ಆದರೆ ಈ ಬಾರಿ ಜನರಿಗೆ ಗೊತ್ತಿದೆ ಭಾವನಾತ್ಮಕ ವಿಷಯದಿಂದ ಹೊಟ್ಟೆ ತುಂಬುವದಿಲ್ಲ ಎಂದು ಅವರಿಗೆ ಗೊತ್ತಿದೆ ಅವರು ಅಷ್ಟು ಮೂರ್ಖರಲ್ಲ ಎಂದರು.
ಅದೇ ರೀತಿ ಕಾರಣ ಮುಂದಿನ ಚುನಾವಣೆಗೆ ಹುಡುಕುತ್ತಿದ್ದಾರೆ. ಆದರೆ ಬಿಜೆಪಿಯವರು ಏನೇ ಬಾಲಬಿಚ್ಚಿದರೂ ಇನ್ನೂ ಮುಂದೆ ಯಶಸ್ವಿಯಾಗುವದಿಲ್ಲ ಎಂದರು.
ಇಂಥ ಭಾವನಾತ್ಮಕ ವಿಷಯವನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುವದಾದರೆ ಕಾಂಗ್ರೆಸ್ ಸಹ ಇದಕ್ಕೆ ತಕ್ಕ ಕೌಂಟರ್ ನೀಡುತ್ತಲೇ ಇದೆ. ಅಂದು ಹಿಂದು ಕಾರ್ಯಕರ್ತ ಪರೇಶ್ ಮೇಸ್ತ್ರಾ ಹತ್ಯೆಯನ್ನು ಸಿಬಿಐಗೆ ವಹಿಸಿದ್ದಾಗ, ಅದನ್ನು ಸಿದ್ದರಾಮಯ್ಯ ತಿದ್ದಿದ್ದಾರೆ ಎಂದು ಹೇಳಿದರು, ಆದರೆ ಆವಾಗ ಇದೇ ಬಿಜೆಪಿ ಸರ್ಕಾರವಿತ್ತು, ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಅವರಿಗೆ ಬಿ ರಿಪೋರ್ಟ್ ನೀಡಿತು ಎಂದರು.
ದೊಡ್ಡ ಸಂಸ್ಥೆಯಾಗಿರುವ ಸಿಬಿಐ ನೀಡಿದ ವರದಿಯನ್ನು ಅನುಮಾನದಿಂದ ಬಿಜೆಪಿ ನೋಡಿತು. ಈ ಸರ್ಕಾರ ಬಂದಿದ್ದು ಜನರ ಸಹಕಾರದಿಂದಲ್ಲ, ಸಾವಿನ ಮನೆಯಲ್ಲಿ ಕುಳಿತು ಅಧಿಕಾರ ನಡೆಸಿದ್ದಾರೆ. ಈಗ ನಿತ್ಯ ಶೇ.40, ಶೇ.30 ಪರ್ಸೆಂಟ್ , ಸ್ಯಾಂಟ್ರೋ ರವಿ ಪ್ರಕರಣ ಬೆಳಕಿಗೆ ಬರಲು ಅವರು ಅಧಿಕಾರಕ್ಕೆ ಬಂದಿದ್ದು, ಬಿಜೆಪಿ ಜನರ ವಿಶ್ವಾಸದಿಂದಲ್ಲ ಎಂದು ತೋರಿಸುತ್ತದೆ ಎಂದರು.
ಜಿಲ್ಲಾವಾರು ಪ್ರನಾಳಿಕೆ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪರವಾಗಿ ರಾಜ್ಯಕ್ಕೆ ಒಂದು ಪ್ರನಾಳಿಕೆ ತಯಾರಿಸಲಾಗುತ್ತಿದೆ. ನಂತರ ಪ್ರತಿ ಜಿಲ್ಲಾವಾರು ಪ್ರತ್ಯೇಕ ಪ್ರನಾಳಿಕೆಯನ್ನು ತಯಾರಿ ನಡೆಸಲಾಗುತ್ತಿದೆ ಎಂದರು.
ಒಂದು ಜಿಲ್ಲೆಯಲ್ಲಿರುವ ಸಮಸ್ಯೆ ಬೇರೆ ಜಿಲ್ಲೆಯಲ್ಲಿ ಇಲ್ಲ, ಹೀಗಾಗಿ ಜಿಲ್ಲಾವಾರು ಪ್ರನಾಳಿಕೆಗೆ ಆದ್ಯತೆ ನೀಡಲಾಗಿದೆ. ಆಯಾ ಸ್ಥಳೀಯ ಮುಖಂಡರ ನೇತ್ವತೃದಲ್ಲಿ ಚಿಂತನ ಮಂಥನ ನಡೆಸಿ ಪ್ರನಾಳಿಕೆ ತಯಾರಿಸುವುದಾಗಿ ತಿಳಿಸಿದರು.
ಬಿಜೆಪಿಯವರ ತರ 300-400 ಭರವಸೆಯ ಪ್ರನಾಳಿಕೆ ತಯಾರಿಸಿ ಬುರುಡೆ ಬಿಟ್ಟುವರ ರೀತಿ ಅದರಲ್ಲಿ 10 ಆಶ್ವಾಸನೆ ಈಡೇರಿಸದೇ ಇರಲು ಆಗುವದಿಲ್ಲ ಎಂದರು.