ಬಿಜೆಪಿ ನೆಪ ಹೇಳುವ ಬದಲು ಪಿ.ಎಫ್.ಐಯನ್ನು ನಿಷೇಧಿಸಿ – ದಿನೇಶ್ ಗುಂಡೂರಾವ್ ಸವಾಲ್

ರಾಜ್ಯ ಸೇರಿದಂತೆ ದೇಶದ ಹಲವೆಡೆ NIA ಅಧಿಕಾರಿಗಳು PFI ಕಚೇರಿಯ ಮೇಲೆ ದಾಳಿ ಮಾಡಿ ಹಲವರನ್ನು ಬಂಧಿಸಿದ್ದಾರೆ. ಭಯೋತ್ಪಾದನೆ, ದೇಶ ವಿರೋಧಿ ಚಟುವಟಿಕೆ, ವಿದೇಶಿ ಹಣವನ್ನು ಉಗ್ರಕೃತ್ಯಕ್ಕೆ ಬಳಸಿರುವ ಆರೋಪ PFI ಮೇಲಿದೆ.
ಹಾಗಾಗಿ PFI ಯನ್ನು ನಿಷೇಧಿಸಲು ಇದು ಸಕಾಲ.
BJPಯವರು ಇನ್ನಾದರೂ ನೆಪ ಹೇಳುವ ಬದಲು PFI ಸಂಘಟನೆಯನ್ನು ನಿಷೇಧಿಸಲಿ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ತಿಳಿಸಿದರು.

ಯಾವುದೇ ಸಂಘಟನೆ ದೇಶ ವಿರೋಧಿ ಕೃತ್ಯಗಳಲ್ಲಿ ತೊಡಗಿದ್ದರೆ ಆ ಸಂಘಟನೆಯ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದು ಸರ್ಕಾರದ ಕರ್ತವ್ಯ.
ಕೆಲವು ಗಲಭೆಗಳಾದಾಗ BJPಯವರು PFI ಸಂಘಟನೆಯ ವಿರುದ್ಧ ಬೊಟ್ಟು ತೋರಿಸಿ ದೇಶದ್ರೋಹದ ಆರೋಪ ಮಾಡುತ್ತಾರೆ, ನಂತರ ಸುಮ್ಮನಾಗುತ್ತಾರೆ.

ವೃಥಾ ಆರೋಪ ಮಾಡುವ ಬದಲು ಈಗಲಾದರೂ PFI ಸಂಘಟನೆ ನಿಷೇಧಿಸಲಿ ಎಂದರು.

Latest Indian news

Popular Stories

Social Media Auto Publish Powered By : XYZScripts.com
error: Content is protected !!