ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆತ: ನಾಲ್ವರು ಶಾಸಕರ ಮೇಲೆ ಕ್ರಮ ಸಾಧ್ಯತೆ

ಬಿಜೆಪಿ ಸದಸ್ಯರಿಂದ ಡೆಪ್ಯುಟಿ ಸ್ಪೀಕರ್ ಮೇಲೆ ಕಾಗದ ಪತ್ರ ಎಸೆಯಲಾಗಿದ್ದು, ಬಿಜೆಪಿಯ ನಾಲ್ವರು ಶಾಸಕರ ಮೇಲೆ ಸ್ಪೀಕರ್ ಕ್ರಮ ಸಾಧ್ಯತೆ ಇದೆ. ಈಗಾಗಲೇ ಸ್ಪೀಕರ್​ಗೆ ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಸದಸ್ಯರು ದೂರು ನೀಡಿದ್ದಾರೆ.

ಬಜೆಟ್ ಪತ್ರವನ್ನು ಎಸೆದು ಡೆಪ್ಯೂಟಿ ಸ್ಪೀಕರ್’ಗೆ ಅವಮಾನ ಮಾಡಿರುವುದನ್ನು ಕಾಂಗ್ರೆಸ್ ಖಂಡಿಸಿದೆ.

ಇದೇ ಸಂದರ್ಭದಲ್ಲಿ ಹರಿದ ಕಾಗದ ತುಂಡುಗಳನ್ನು ಹೆಕ್ಕಲು ಬಂದ ಮಾರ್ಷಲ್ ಸಿಬ್ಬಂದಿಯನ್ನು ಶಾಸಕ ಸುನೀಲ್ ಕುಮಾರ್ ಬೈಯುತ್ತಿರುವುದು ಕೂಡ ವೀಡಿಯೋ ದಲ್ಲಿ ಸೆರೆ ಆಗಿದೆ.

Latest Indian news

Popular Stories