ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಹೆಚ್ಚು ಹಿಂದೂಗಳ ಹತ್ಯೆಯಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸುತ್ತಿರುವ ನಡುವೆಯೇ ಸಿದ್ದರಾಮಯ್ಯ ಅವರು ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಸರ್ಕಾರದ ಅವಧಿಯಲ್ಲೇ ಹೆಚ್ಚು ಹಿಂದೂಗಳ ಕೊಲೆಗಳಾಗಿವೆ ಎಂದು ಹೇಳಿಕೆ ನೀಡಿದ್ದಾರೆ.
ನಮ್ಮ ಕಾಲದಲ್ಲಿ ಹಿಂದೂಗಳಷ್ಟೇ ಅಲ್ಲ, ಅಲ್ಪಸಂಖ್ಯಾತರ ಕೊಲೆ ಆಗಿವೆ. ಅವುಗಳೆಲ್ಲ ಬೇರೆ ಬೇರೆ ವಿಚಾರಕ್ಕೆ ಆಗಿರುವ ಕೊಲೆಗಳಾಗಿವೆ ಎಂದರು.
ನಮ್ಮ ಸರ್ಕಾರದ ಅವಧಿಯಲ್ಲಿ ನಡೆದ ಹಿಂದೂಗಳ ಹತ್ಯೆಯಾಗಲು ಆರ್ಎಸ್ಎಸ್, ಬಿಜೆಪಿಯವರೇ ಕಾರಣರಾಗಿದ್ದಾರೆ. ಪರೇಶ್ ಮೇಸ್ತ ಕೊಲೆಯಾದಾಗ ದೊಡ್ಡ ಗಲಾಟೆ ಮಾಡಿದ್ದರು. ಆಗ ಮೇಸ್ತ ಪ್ರಕರಣವನ್ನ ಸಿಬಿಐಗೆ ಕೊಟ್ಟಿದ್ದೆ, ಆಮೇಲೆ ಏನಾಯ್ತು ಎಂದು ವಿಪಕ್ಷ ನಾಯಕರು ಪ್ರಶ್ನಿಸಿದರು. ಸಿ.ಟಿ.ರವಿ ಆರ್ಎಸ್ಎಸ್ ಗಿರಾಕಿ, ಅವರಿಗೆ ಬರೀ ಸುಳ್ಳು ಹೇಳುವುದೇ ಕೆಲಸ. ನಾನು ಹಿಂದು ಧರ್ಮದವನು. ಹಿಂದೂ ಧರ್ಮದ ಬಗ್ಗೆ ನಾನು ಮಾತನಾಡಿಯೇ ಇಲ್ಲಾ, ವಿರೋದವು ಮಾಡಿಲ್ಲ. ಯಾವುದೇ ಧರ್ಮ, ಹಿಂಸೆಗೆ ಪ್ರಚೋದನೆ ಮಾಡಿದರೆ ಅದಕ್ಕೆ ಧರ್ಮದ ಚೌಕಟ್ಟು ಕೊಡಕ್ಕೆ ಮಾಡಿದರೆ ಅದು ಸರಿಯಲ್ಲ. ಸಾಮರಸ್ಯವನ್ನು ಹಾಳು ಮಾಡುವುದೇ ಬಿಜೆಪಿ ನಾಯಕರ ಕೆಲಸ ಎಂದರು.
ಇನ್ನು, ಕಾಂಗ್ರೆಸ್ ಪಾಕಿಸ್ತಾನದಲ್ಲಿ ಸ್ಪರ್ಧೆ ಮಾಡಿದರಷ್ಟೇ 150 ಸ್ಥಾನ ಗೆಲ್ಲುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕರ್ನಾಟಕ ಪಾಕಿಸ್ತಾನದಲ್ಲಿ ಇದೆಯಾ?ಭಾರತದಲ್ಲಿದೆಯಾ? ಚುನಾವಣೆ ನಡೆಯುತ್ತಿರುವುದು ಪಾಕಿಸ್ತಾನದಲ್ಲಾ? ಕರ್ನಾಟಕದಲ್ಲಾ? ಪೆದ್ದು ಪೆದ್ದಾಗಿ ಮಾತನಾಡುತ್ತೀರಲ್ಲಾ ಅಂತಾ ಸಿ.ಟಿ.ರವಿಯನ್ನೇ ಕಿಚಾಯಿಸಿದರು.