ಬೀದರಿನ ಬಿದ್ರಿ ಕಲಾವಿದ ಶಾಹ ರಶೀದ್‌ ಅಹ್ಮದ್‌ ಖಾದ್ರಿ ಅವರಿಗೆ 2023 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ‌ ಆಯ್ಕೆ

ಬೀದರ್ : ಬೆಳ್ಳಿ ಕುಸರಿಯ ಬಿದ್ರಿ ಕಲೆಯನ್ನು ದೇಶ ವಿದೇಶದಲ್ಲಿ ಖ್ಯಾತಿಗೊಳಿಸಿರುವ ಬೀದರನ ಬಿದ್ರಿ ಕಲಾವಿದ ಶಾಹ ರಶೀದ್‌ ಅಹ್ಮದ್‌ ಖಾದ್ರಿ ಅವರು ಕೇಂದ್ರ ಸರ್ಕಾರದಿಂದ ಕೊಡಮಾಡುವ 2023 ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಗೆ‌ ಆಯ್ಕೆಯಾಗಿದ್ದಾರೆ.

IMG 20230126 WA0025 Featured Story, Bidar

ನಗರದ ಸಿದ್ದಿ ತಾಲೀಮ್ ನಿವಾಸಿಯಾಗಿರುವ ರಶೀದ್ ಅಹ್ಮದ್ ಖಾದ್ರಿ‌ (78) ಅವರು ಪಿಯುಸಿವರೆಗೆ ಶಿಕ್ಷಣ ಪಡೆದಿದ್ದು, ತಂದೆಯ ವಿರೋಧದ ನಡುವೆಯೂ ಬಿದ್ರಿ ಕಲೆಯತ್ತ ಆಕರ್ಷಿತರಾಗಿ‌, ಆ ಕಲೆಯನ್ನೇ ವೃತ್ತಿಯನ್ನಾಗಿಸಿಕೊಂಡರು. ಈ ಐತಿಹಾಸಿಕ ಕ್ರಾಫ್ಟ್ ಅವರನ್ನು‌ ದೇಶ- ವಿದೇಶದಲ್ಲಿ ಪರಿಚಯಿಸುವುದರ ಜತೆಗೆ ಇಂದು‌ ಪದ್ಮಶ್ರೀ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಳ್ಳುವಂತೆ ಮಾಡಿದೆ.

ಶಿಲ್ಪಗುರು ಪ್ರಶಸ್ತಿ ವಿಜೇತರಾದ ಖಾದ್ರಿ ಅವರು ಬಿದ್ರಿ ಕಲೆಗಾಗಿ ಖಾದ್ರಿ ಜೀವನ ಮುಡುಪಾಗಿಟ್ಟಿದ್ದಾರೆ. ಜತೆಗೆ, ಜಿಲ್ಲೆಯ ಹಲವರಿಗೆ ಬಿದ್ರಿ ಕಲೆಯ ತರಬೇತಿ ನೀಡಿ ಬದುಕು‌ ರೂಪಿಸಿದ್ದಾರೆ.

ದೆಹಲಿಯಲ್ಲಿ 2011ರ ಗಣರಾಜ್ಯೋತ್ಸವ ಪರೇಡ್ ನಲ್ಲಿ‌ ಖಾದ್ರಿ ಅವರು ಕರ್ನಾಟವನ್ನು ಪ್ರತಿನಿಧಿಸಿ‌ ಪ್ರದರ್ಶಿಸಿದ ಬಿದ್ರಿ ಕಲಾಕೃತಿಯ ಟ್ಯಾಬ್ಲೋಗೆ ಎರಡನೇ ಸ್ಥಾನ ಲಭಿಸಿತ್ತು. ಖಾದ್ರಿ ಅವರು ಬೊಸ್ಟನ್‌ (ಅಮೆರಿಕಾ), ರೋಮ್‌ (ಇಟಲಿ), ಸಿಂಗಾಪುರ, ಬಾರ್ಸಿಲೋನಾ (ಸ್ಪೇನ್‌), ಬೆಹರೀನ್‌, ಮಸ್ಕತ್‌ (ಓಮಾನ್‌) ದೇಶಗಳಲ್ಲಿ ಭಾತರವನ್ನು ಪ್ರತಿನಿಧಿಸಿ, ಬಿದ್ರಿ ಕಲೆಯನ್ನು‌ ಪ್ರದರ್ಶಿಸಿದ್ದಾರೆ.

Latest Indian news

Popular Stories