ನವದೆಹಲಿ: ರಾಜಧಾನಿಯಲ್ಲಿ ಬಿಜೆಪಿ ನೇತೃತ್ವದ ಎಂಸಿಡಿ ನಡೆಸಿದ ಅತಿಕ್ರಮಣ-ವಿರೋಧಿ ಡ್ರೈವ್‌ಗಳನ್ನು ಗುರಿಯಾಗಿಟ್ಟುಕೊಂಡು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಮಾತನಾಡುತ್ತ, ನಗರದಲ್ಲಿ 63 ಲಕ್ಷಕ್ಕೂ ಹೆಚ್ಚು ಜನರಿಗೆ ಬುಲ್‌ಡೋಜರ್‌ಗಳನ್ನು ಓಡಿಸಲು ಸ್ಥಳಿಯಾಡಳಿತದ ಸಂಸ್ಥೆ ಯೋಜಿಸುತ್ತಿದೆ ಎಂದು ಹೇಳಿದರು, ಇದು “ಸ್ವತಂತ್ರ ಭಾರತದಲ್ಲಿನ ಅತಿದೊಡ್ಡ ವಿಧ್ವಂಸಕ ಕೃತ್ಯ”. ಕೇಜ್ರಿವಾಲ್ ಅವರು ತಮ್ಮ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರಿಗೆ ಜನರ ಪರವಾಗಿ ನಿಲ್ಲುವಂತೆ ಮತ್ತು ಈ “ಗುಂಡಗಾರ್ದಿ” ವಿರುದ್ಧ ಪ್ರತಿಭಟಿಸುವಂತೆ ಹೇಳಿರುವುದಾಗಿ ತಿಳಿಸಿದರು.
“ಕಳೆದ ಕೆಲವು ವಾರಗಳಲ್ಲಿ, ಬಿಜೆಪಿ ನೇತೃತ್ವದ ಎಂಸಿಡಿ ಬುಲ್ಡೋಜರ್‌ಗಳನ್ನು ಓಡಿಸುತ್ತಿರುವುದನ್ನು ನಾವು ನೋಡಿದ್ದೇವೆ. ಇದು ಮುಂದಿನ ತಿಂಗಳುಗಳು ಕೂಡ ಮುಂದುವರಿಯುತ್ತದೆ ಎಂದು ಹೇಳಲಾಗುತ್ತಿದೆ. ದೆಹಲಿಯಲ್ಲಿನ ಎಲ್ಲಾ ಅತಿಕ್ರಮಣಗಳು ಮತ್ತು ಅಕ್ರಮ ನಿರ್ಮಾಣಗಳನ್ನು ತೆಗೆದುಹಾಕುವುದಾಗಿ ಅವರು ಹೇಳುತ್ತಿದ್ದಾರೆ. ನಾವು ಕೂಡ ಅತಿಕ್ರಮಣಗಳ ವಿರೋಧಿಗಳು, ನಮಗೆ ಅಕ್ರಮ ನಿರ್ಮಾಣಗಳು ಬೇಡ, ”ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
“ಕಳೆದ 75 ವರ್ಷಗಳಲ್ಲಿ ದೆಹಲಿಯನ್ನು ಯೋಜಿತ ರೀತಿಯಲ್ಲಿ ಮಾಡಲಾಗಿಲ್ಲ. ದೆಹಲಿಯ ಶೇಕಡಾ 80 ಕ್ಕಿಂತ ಹೆಚ್ಚು ಭಾಗ ಅಕ್ರಮ ನಿರ್ಮಾಣ ಅಥವಾ ಅತಿಕ್ರಮಣದ ವ್ಯಾಪ್ತಿಗೆ ಬರಲಿದೆ. ಹಾಗಾದರೆ ದೆಹಲಿಯ ಶೇಕಡಾ 80 ರಷ್ಟು ನೆಲಸಮವಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಕೇಜ್ರಿವಾಲ್ ಬಿಜೆಪಿಗೆ ಸವಾಲೆಸೆದಿದ್ದಾರೆ.
ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ತಮ್ಮ ಪಕ್ಷದ ಶಾಸಕರ ಸಭೆ ನಡೆಸಿದ್ದಾರೆ ಎಂದು ಹೇಳಿದರು. “ ಜೈಲಿಗೆ ಭಯಪಡಬೇಡಿ ಎಂದು ನಾನು ಅವರಿಗೆ ಹೇಳಿದೆ. ನೀವು ಜನರ ಪರವಾಗಿ ನಿಲ್ಲಬೇಕು. ಈ ರೀತಿ ಬುಲ್ಡೋಜರ್ ಓಡಿಸುವುದು ಸರಿಯಲ್ಲ. ದಾದಾಗಿರಿ, ಗುಂಡಾಗರ್ದಿ ಮಾಡುವುದು ಸರಿಯಲ್ಲ. ಅಧಿಕಾರ ದುರುಪಯೋಗ ಮಾಡಿಕೊಳ್ಳುವುದು ಸರಿಯಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.