ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಖಂಡನೀಯ – ಕ್ರಮಕೈಗೊಳ್ಳಲು ಸಾಲಿಡಾರಿಟಿ ಉಡುಪಿ ಆಗ್ರಹ

ಬೆಂಗಳೂರಿನ ಜೈನ್‌ ಡೀಮ್ಡ್‌ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯಗಳ ವಿರುದ್ಧ ಅವಹೇಳನಕಾರಿ ನಾಟಕ ಪ್ರದರ್ಶನ ಮಾಡಿದ್ದು ಇದು ಖಂಡನೀಯವಾಗಿದೆ. ಈ ಕೂಡಲೇ ವಿಶ್ವವಿದ್ಯಾಲಯದ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲೆ ಆಗ್ರಹಿಸುತ್ತದೆ.

ʼಜೈನ್ ವಿಶ್ವವಿದ್ಯಾಲಯದ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕೇಂದ್ರದ (CMS) ಕಾಲೇಜು ತಂಡವು ಕಾರ್ಯಕ್ರಮದಲ್ಲಿ, ” ಜಾತಿವಾದಿ ಮತ್ತು ಸಂವೇದನಾಶೀಲವಲ್ಲದ ಸ್ಕಿಟ್‌ ರಚಿಸಿʼ ಪ್ರದರ್ಶಿಸಿದೆ ಎಂದು ಮಾಧ್ಯಮ ವರದಿಗಳು ಬೆಳಕು ಚೆಲ್ಲಿದೆ.

ಕಳೆದ ಫೆ. 5 ರಂದು ಜೈನ್‌ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ʼಸಂಯೋಗ – ಜೈನ್‌ ಯೂನಿವರ್ಸಿಟಿ ಯೂಥ್‌ ಫೆಸ್ಟ್ʼ ಕಾರ್ಯಕ್ರಮದ ಮ್ಯಾಡ್‌ ಆಡ್ಸ್‌ ಎಂಬ ಇವೆಂಟಿನಲ್ಲಿ ಜೈನ್‌ ಡೀಮ್ಡ್ ಯೂನಿವರ್ಸಿಟಿಯ ಸೆಂಟರ್‌ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಕೇಂದ್ರದ (CMS) ವಿದ್ಯಾರ್ಥಿಗಳು , ಸ್ಕಿಟ್‌ ರಚಿಸಿ ಪ್ರದರ್ಶಿಸಿದ್ದರು. ಹಾಸ್ಯದ ಹೆಸರಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಮತ್ತು ಪರಿಶಿಷ್ಟ ಜಾತಿಗಳನ್ನು ಅಪಮಾನಿಸುವ ನಾಟಕ ಪ್ರದರ್ಶಿಸಿದ್ದಾರೆ.‌

ಇದೊಂದು ವಿಕೃತ ಮನಸ್ಸಿನ ಸ್ಕ್ರಿಪ್ಟ್ ಆಗಿದ್ದು ಜೈನ್ ವಿಶ್ವವಿದ್ಯಾಲಯ ತನ್ನ ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ವಿರೋಧಿ ಮನಸ್ಥಿತಿಯ ಅನಾವರಣಗೊಳಿಸಿದೆ. ಈ ಕೂಡಲೇ ಸರ್ಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಮತ್ತು ಈ ನಾಟಕ ನಡೆಸಲು ಅನುವು ಮಾಡಿಕೊಟ್ಟ ಆಡಳಿತ ಮಂಡಳಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಲಿಡಾರಿಟಿ ಉಡುಪಿ ಆಗ್ರಹಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Latest Indian news

Popular Stories