ಬೆಂಗಳೂರು-ಧಾರವಾಡ ಸೇರಿದಂತೆ ಐದು ‘ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿಗೆ ಪ್ರಧಾನಿ ಮೋದಿ ಚಾಲನೆ

ಮಧ್ಯ ಪ್ರದೇಶ/ಧಾರವಾಡ: ಬೆಂಗಳೂರು-ಧಾರವಾಡ ಸೇರಿದಂತೆ ಐದು ‘ವಂದೇ ಭಾರತ್’ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಮಧ್ಯ ಪ್ರದೇಶದ ರಾಣಿ ಕಮಲಾಪತಿ ರೈಲು ನಿಲ್ದಾಣದಲ್ಲಿ ನಡೆದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಉದ್ಘಾಟನಾ ಸಮಾರಂಭದಲ್ಲಿ  ರಾಣಿ ಕಮಲಾಪತಿ-ಜಬಾಲ್ಪುರ, ಖಜುರಾಹೊ- ಭೂಪಾಲ್- ಇಂದೋರ್, ಗೋವಾದ ಮಂಡಗಾವ್- ಮುಂಬೈ, ಧಾರವಾಡ- ಬೆಂಗಳೂರು, ಹಟಿಯಾ- ಪಾಟ್ನಾ ನಡುವೆ ಸಂಚರಿಸಲು ರೈಲುಗಳಿಗೆ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದರು. 

ಧಾರವಾಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಶಾಸಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮೇಯರ್ ವೀಣಾ ಭರದ್ವಾಡ ಮತ್ತಿತರರು ಭಾಗವಹಿಸಿದರು. 

Latest Indian news

Popular Stories