ಬೆಂಗಳೂರು: ಹೆಣ್ಣುಮಕ್ಕಳನ್ನು ಬಳಸಿಕೊಂಡು ಮಾಂಸ ದಂಧೆ ಶುರು ಮಾಡಿದ ಸ್ಯಾಂಡಲ್ವುಡ್ ನಟನನ್ನು ಪೊಲೀಸರು ಬಂಧಿಸಿದ್ದಾರೆ.
ಲೊಕ್ಯಾಂಟೋ ಆ್ಯಪ್ ನ ಹಿಂದೆ ಬಿದ್ದಂತಹ ನಟ ಈಗ ಕಂಬಿ ಎಣಿಸುತ್ತಿದ್ದಾರೆ. ಹುಡುಗಿಯರ ಫೋಟೋಗಳನ್ನು ಬಳಸಿಕೊಂಡು ನಕಲಿ ಪ್ರೊಫೈಲ್ ಬಳಸಿ ದಂಧೆ ಮಾಡುತ್ತಿದ್ದ ನಟನನ್ನು ಪೊಲೀಸರು ಬಂಧಿಸಿದ್ದಾರೆ. ಹೀರೋ ಆಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೇ ದಂಧೆಯಲ್ಲಿ ಪ್ರಮುಖ ಆರೋಪಿಯಾಗಿದ್ದು ಸಂಜು ಅಲಿಯಾಸ್ ಮಂಜುನಾಥ್ ಅರೆಸ್ಟ್ ಆಗಿದ್ದಾರೆ.
ಸೈಕೋಲಾಜಿ ಸಂಬಂಧಪಟ್ಟಂತಹ ನ್ಯೂರಾನ್ ಚಿತ್ರದಲ್ಲಿ ನಟಿಸಿದ್ದ ನಾಯಕ ನಟ ಮಂಜುನಾಥ್ ಬಂಧನವಾಗಿದೆ. ಈ ಸಿನಿಮಾ 2019ರಲ್ಲಿ ಬಿಡುಗಡೆಯಾಗಿತ್ತು. ಈ ಸಂಬಂಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.. ತನಿಖೆ ಸಂಬಂಧ ಚಿತ್ರನಟ ಸೇರಿ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಯುವ ಎಂದು ಹೆಸರಿಟ್ಟುಕೊಂಡು ಚಿತ್ರರಂಗಕ್ಕೆ ಪ್ರವೇಶ ನೀಡಿದ್ದ ಮಂಜುನಾಥ್ ಅಥವಾ ಸಂಜು ಲೊಕ್ಯಾಂಟೋದಲ್ಲಿ ಹುಡುಗಿಯರ ಫೋಟೋ ಬಳಸಿ ಗ್ರಾಹಕರನ್ನ ಸೆಳೆದು ಸುಲಿಗೆ ಮಾಡುವುದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ದರು.