ಬೆಂಗಳೂರು ವಿಮಾನ ನಿಲ್ದಾಣದಲ್ಲಿ ತಮಿಳು ನಟ ವಿಜಯ್ ಸೇತುಪತಿ ಮೇಲೆ ಹಲ್ಲೆ

ನಟ ವಿಜಯ್ ಸೇತುಪತಿ ಅವರು ಬೆಂಗಳೂರಿನ ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಬರುವ ಪ್ಲ್ಯಾನ್‌ನಲ್ಲಿದ್ದರು. ತಮಿಳುನಾಡಿನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಜಯ್ ಸೇತುಪತಿ ಬಂದಿಳಿದ ನಂತರದಲ್ಲಿ ವಿಜಯ್ ಸೇತುಪತಿ ಮೇಲೆ ಹಲ್ಲೆ ನಡೆದಿದೆ. ನಿನ್ನೆ ರಾತ್ರಿ 11 ಗಂಟೆಗೆ (ನ.2) ಈ ಘಟನೆ ನಡೆದಿದೆ.

ವಿಜಯ್ ಸೇತುಪತಿ ಜೊತೆಗೆ ಬರುತ್ತಿದ್ದ ಸಹ ಪ್ರಯಾಣಿಕ ಕುಡಿದ ಅಮಲಿನಲ್ಲಿ ವಿಮಾನದಲ್ಲಿಯೇ ಅವರ ಪಿಎ ಜೊತೆಗೆ ಒಂದಷ್ಟು ಗಲಾಟೆ ಮಾಡಿಕೊಂಡಿದ್ದರು. ಆ ವೇಳೆ ವಿಜಯ್ ಸೇತುಪತಿ ಅವರಿಬ್ಬರ ಗಲಾಟೆಯನ್ನು ಬಿಡಿಸಲು ಹೋಗಿ ಮಾತಿನ ಚಕಮಕಿ ನಡೆದಿತ್ತು. ಇನ್ನು ವಿಜಯ್ ಸೇತುಪತಿ ಅವರು ವಿಮಾನದಿಂದ ಇಳಿದು ಹೋಗುತ್ತಿರುವಾಗ ಆ ಸಹ ಪ್ರಯಾಣಿಕ ಏಕಾಏಕಿ ವಿಜಯ್ ಮೇಲೆ ಹಲ್ಲೆ ಮಾಡಿದ್ದಾನೆ. ಆ ವಿಡಿಯೋ ವೈರಲ್ ಆಗಿದೆ.

ಹಲ್ಲೆ ನಡೆದಾಗ ಏರ್‌ಪೋರ್ಟ್‌ನಲ್ಲಿದ್ದ ಸಿಬ್ಬಂದಿಗಳು ಗಲಾಟೆ ಬಿಡಿಸುವ ಪ್ರಯತ್ನ ಮಾಡಿದ್ದಾರೆ, ಸಹ ಪ್ರಯಾಣಿಕನನ್ನು ವಶಕ್ಕೆ ಪಡೆಯಲಾಗಿದೆ. ಆನಂತರದಲ್ಲಿ ವಿಜಯ್ ಸೇತುಪತಿ ದೂರು ನೀಡಲು ಮುಂದಾಗಿದ್ದಾರೆ. ವಿಜಯ್ ಸೇತುಪತಿ & ಸಹಪ್ರಯಾಣಿಕರ ಮಧ್ಯೆ ರಾಜಿ ಸಂಧಾನ ಆಗಿದೆ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ಹಲ್ಲೆ ಮಾಡಿದವರು ತಮಿಳುನಾಡಿನ ಮೂಲದವರು ಎಂಬ ಮಾಹಿತಿ ಲಭ್ಯವಾಗಿದೆ.

Latest Indian news

Popular Stories

error: Content is protected !!